ಪುತ್ತೂರು ಮೆಡಿಕಲ್ ಆಸ್ಪತ್ರೆ ಕಡತ ಇಂದು ಕ್ಯಾಬಿನೆಟ್ ಗೆ:
ಮಂಜೂರಾತಿ ಬಳಿಕ ಕಟ್ಟಡ ನಿರ್ಮಾಣಕ್ಕೆ ಚಾಲನೆ
ಪುತ್ತೂರು: ಪುತ್ತೂರು ಜನತೆಯ ಬಹುದಿನದ ಕನಸುಗಳು ಶಾಸಕ ಅಶೋಕ್ ರೈ ಮೂಲಕ ನನಸಾಗುತ್ತಲೇ ಇದೆ.
ಮೆಡಿಕಲ್ ಕಾಲೇಜು ಪುತ್ತೂರಿಗೆ ಮಂಜೂರಾಗಿದೆ ಆ ಬಳಿಕ ಮೆಡಿಕಲ್ ಆಸ್ಪತ್ರೆಯೂ ಮಂಜೂರಾಗಬೇಕಿತ್ತು. ಪುತ್ತೂರಿನ ಮೆಡಿಕಲ್ ಕಾಲೇಜು ನಿರ್ಮಾಣವಾಗುವ ಬನ್ನೂರಿನಲ್ಲೇ 400 ಬೆಡ್ ಗಳ ಆಸ್ಪತ್ರೆಯ ನಿರ್ಮಾಣ ಆಗಲಿದೆ. ಇದಕ್ಕಾಗಿ ಕಳೆದ ಕೆಲವು ತಿಂಗಳಿಂದ ಸಂಬಂದಿಸಿದ ಪ್ರಕ್ರಿಯೆ ನಡೆಯುತ್ತಿದ್ದು ಕಳೆದ ವಾರ ಮಡಿಕೇರಿ ಸರಕಾರಿ ಮೆಡಿಕಲ್ ಕಾಲೇಜು ಡೀನ್ ಪುತ್ತೂರು ಭೇಟಿ ಮಾಡಿದ್ದರು.

ಇದೀಗ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದ ಕಡತಗಳು ಇಂದು ಕ್ಯಾಬಿನೆಟ್‌ಗೆ ಬರಲಿದೆ. ಇಂದು ಸಂಜೆ ಕ್ಯಾಬಿನೆಟ್ ಮಂಜೂರಾತಿ ಸಿಗಲಿದ್ದು ಬಳಿಕ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆಯೂ ದೊರೆಯಲಿದೆ. ಮೆಡಿಕಲ್ ಆಸ್ಪತ್ರೆ ನಿರ್ಮಾಣವಾದರೆ ಇಲ್ಲಿನ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಲಿದೆ. ಎಲ್ಲದಕ್ಕೂ ಮಂಗಳೂರಿನ ಆಸ್ಪತ್ರೆಯನ್ನೇ ನಂಬಿದ್ದ ಜನತೆಗೆ ಸಂತಸ ಉಂಟು ಮಾಡಲಿದೆ.





