ಸುಳ್ಯ: ಕಾರಿನ ಗ್ಲಾಸ್‌ಗೆ ಹಾನಿ ಮಾಡಿದ ಆರೋಪ, ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು
ಸುಳ್ಯ: ಮನೆಯ ಆವರಣದೊಳಗೆ ಅಕ್ರಮ ಪ್ರವೇಶ ಮಾಡಿ ಕಾರಿನ ಗ್ಲಾಸ್‌ಗೆ ಹಾನಿ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವರ ವಿರುದ್ದ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಪ್ರೀತ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಫೆ.20ರಂದು ಸುಪ್ರಿತ್ ಸುಳ್ಯದ ಬಾಲಚಂದ್ರ ಎಂಬವರ ಮನೆಯ ಆವರಣದೊಳಗೆ ಅವರ ತಂದೆ-ತಾಯಿ ಮಾತ್ರ ಇದ್ದ ವೇಳೆ ಅಕ್ರಮ ಪ್ರವೇಶಗೈದು ಮನೆಯ ಬಳಿಯಿದ್ದ ಕಾರಿನ ಗ್ಲಾಸ್‌ಗೆ ಹೆಲೈಟ್‌ನಿಂದ ಹೊಡೆದು ಹಾನಿ ಮಾಡಿದ್ದು, 5 ಸಾವಿರ ರೂ. ನಷ್ಟ ಉಂಟಾಗಿದೆ’ ಎಂದು ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಸುಳ್ಯ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




