ಕರಾವಳಿರಾಜ್ಯ

ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಾಜಧಾನಿಯಲ್ಲಿ ರಕ್ತದಾನ ಶಿಬಿರ: ಕರಾವಳಿಯ ಯುವಕರಿಂದ ರಕ್ತದಾನ



ಬೆಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಬ್ಯಾರಿ ಸೆಂಟ್ರಲ್ ಕಮಿಟಿ ಬೆಂಗಳೂರು ವತಿಯಿಂದ ನಾರಾಯಣ ಆಸ್ಪತ್ರೆ ಬೆಂಗಳೂರು ಇದರ ಸಹಕಾರದೊಂದಿಗೆ ರಾಜಧಾನಿ ಬೆಂಗಳೂರಿನ ಗಾಂಧಿನಗರದಲ್ಲಿ ರಕ್ತದಾನ ಶಿಬಿರ ನಡೆಯಿತು.


ರಕ್ತದಾನ ಶಿಬಿರವನ್ನು  ಶಾಫಿ ಸಅದಿ ಮೆಜೆಸ್ಟಿಕ್ ಉದ್ಘಾಟಿಸಿದರು. ಬಿ.ಸಿ.ಸಿ ಅಧ್ಯಕ್ಷರಾದ ಶಬೀರ್ ಬ್ರೀಗೆಡ್  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಬ್ಲಡ್ ಡೋನರ್ಸ್ ಇದರ ಉಪಾಧ್ಯಕ್ಷರಾದ ಅಶ್ರಫ್ ಉಪ್ಪಿನಂಗಡಿ ಮತ್ತು ಹಾರಿಸ್ ಜಿ.ಎಸ್.ಕೆ, ಸೆಲೀಂ ಸಿ.ಎಂ, ಸಿಹಾಬ್, ಸಂಶುದ್ದೀನ್ ಕುಕ್ಕಾಜೆ, ಪತ್ರಕರ್ತ ಇರ್ಷಾದ್ ವೇಣೂರು, ಹಾಗೂ ಬಿಡಿಎಂ ಕಾರ್ಯನಿರ್ವಾಹಕರಾದ ಬಶೀರ್ ಬೆಳ್ಳಾರೆ ಉಪಸ್ಥಿತರಿದ್ದರು.


ನವಾಝ್ ಟಿವಿ9 ವಂದಿಸಿದರು. ಇರ್ಫಾನ್ ಕಲ್ಲಡ್ಕ ನಿರೂಪಿಸಿದರು. ಶಿಬಿರದಲ್ಲಿ ಐವತ್ತರಷ್ಟು ಮಂದಿ ರಕ್ತದಾನ ಮಾಡಿದರು.

Leave a Reply

Your email address will not be published. Required fields are marked *

error: Content is protected !!