ಕರಾವಳಿ

ಹೈಕೋರ್ಟ್’ನಲ್ಲಿ ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕರಾಗಿ ಆಯ್ಕೆಯಾದ ಲತೀಫ್ ಬಡಗನ್ನೂರು ಅವರಿಗೆ ಅಭಿನಂದನೆ ಸಲ್ಲಿಸಿದ ಕಮ್ಯೂನಿಟಿ ಸೆಂಟರ್ಕರ್ನಾಟಕ ಹೈಕೋರ್ಟ್ ನಲ್ಲಿ ರಾಜ್ಯ ಲೋಕಾಯುಕ್ತದ ವಿಶೇಷ ಸರಕಾರಿ ಅಭಿಯೋಜಕರಾಗಿ ಆಯ್ಕೆಯಾದ ಹೈಕೋರ್ಟ್ ನ ಹಿರಿಯ ನ್ಯಾಯವಾದಿ ಲತೀಫ್ ಬಡಗನ್ನೂರ್ ಅವರಿಗೆ ಪುತ್ತೂರು ಕಮ್ಯೂನಿಟಿ ಸೆಂಟರ್ ಅಭಿನಂದನೆ ಸಲ್ಲಿಸಿದೆ.

ಪುತ್ತೂರಿನವರಾದ ಇವರು ನಮ್ಮ ಯುವ ಸಮೂಹಕ್ಕೆ ಪ್ರೇರಣೆ ಮತ್ತು ಮಾರ್ಗದರ್ಶಕರೂ ಆಗಿದ್ದಾರೆ. ವಿದ್ಯಾರ್ಥಿ ಸಮೂಹವು ಇವರಂತಹ ಘಣ ವ್ಯಕ್ತಿತ್ವಗಳನ್ನು ಮಾದರಿ ಮಾಡಿಕೊಂಡು, ಇವರು ಸಾಧಿಸಿದ ಎತ್ತರವನ್ನು ತಲುಪಲು ಕಠಿಣ ಪರಿಶ್ರಮ ಮಾಡಬೇಕು ಎಂದು ಪುತ್ತೂರು ಕಮ್ಯೂನಿಟಿ ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾವು ಸಮಾಜಕ್ಕೆ ಕೊಡುಗೆ ಕೊಡುವ ಮತ್ತು ಭಾರತದ ಸಂವಿದಾನಕ್ಕೆ ಸೇವೆ ಸಲ್ಲಿಸುವ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಭವಿಷ್ಯದಲ್ಲಿ ಅವಕಾಶಗಳು ಕಡಿಮೆ ಇದ್ದು, ಇಂತಹ ಸಂದರ್ಭದಲ್ಲಿ ಸರಕಾರಿ ಕೆಲಸಗಳಲ್ಲಿ ಹೆಚ್ಚು ಭದ್ರತೆ ಮತ್ತು ಭವಿಷ್ಯ ಇರುವುದರಿಂದ ಪದವೀದರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ನಡೆಸಬೇಕು ಎಂದವರು ಹೇಳಿದರು.

ಆರ್ಥಿಕವಾಗಿ ಹಿಂದುಳಿದವರು ಇಂತಹ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಕಮ್ಯೂನಿಟಿ ಸೆಂಟರ್ ನೆರವು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!