ಬೆಳ್ಳಾರೆ: ಮಗನಿಂದಲೇ ತಂದೆ ತಾಯಿ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು
ತಂದೆ ತಾಯಿ ಮೇಲೆ ಪುತ್ರನೇ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆ ಸಮೀಪ ಕಲ್ಲುಗುಡ್ಡೆ ಕೊಡಿಯಾಲ ಎಂಬಲ್ಲಿಂದ ವರದಿಯಾಗಿದೆ.
ಕೊಡಿಯಾಲ ನಿವಾಸಿಗಳಾದ ಮಂಜುನಾಥ್, ಧರ್ಮವತಿ ಗಾಯಗೊಂಡ ದಂಪತಿಗಳು ಎಂದು ತಿಳಿದು ಬಂದಿದೆ.
ಮಗ ದೇವಿ ಪ್ರಸಾದ್ ಎಂಬಾತ ಕುಡಿದ ಮತ್ತಿನಿಂದ ಜಾಗದ ವಿಚಾರವಾಗಿ ತಕರಾರು ಎದ್ದು ತಂದೆ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಗಂಭೀರ ಗಾಯಗೊಂಡಿರುವ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.