ಇಳಂತಿಲ ಜ್ಞಾನ ಭಾರತಿ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಭೆ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಉಪ್ಪಿನಂಗಡಿ: ಇಳಂತಿಲ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪೋಷಕರ ಸಭೆ ಸನ್ಮಾನ ಕಾರ್ಯಕ್ರಮ ನ.29ರಂದು ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಉಬಾರ್ ಡೊನರ್ಸ್ ಇದರ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ ಶಬೀರ್ ಕೆಂಪಿ ಹಾಗೂ
ಪುತ್ತೂರು ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ
ಪತ್ರಕರ್ತ ಯು. ಎಲ್. ಉದಯ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜ್ಞಾನ ಭಾರತಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇದರ ಅಬ್ದುಲ್ಲ ರಾವೂಫ್ ಯು ಟಿ.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಜೋಗಿಬೆಟ್ಟು, ಉಪಾಧ್ಯಕ್ಷ ಶುಕೂರು ಮೆದ್ರಬೆಟ್ಟು, ಕೋಶಾಧಿಕಾರಿ ಮಜೀದ್ ಮಠ ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಇಬ್ರಾಹಿಂ ಖಲೀಲ್ ಹೆಂತಾರ್, ಇಲ್ಯಾಸ್ ಕರಾಯ, ಸಿದ್ದಿಕ್ ಹ್ಯಾಪಿ ಟೈಮ್ಸ್ ಉಪಸ್ಥಿತರಿದ್ದರು.



