ಕರಾವಳಿಕ್ರೈಂ

ಪುತ್ತೂರು: ಇ.ಎನ್.ಟಿ ಕ್ಲಿನಿಕ್ ನಲ್ಲಿ ದಾಂಧಲೆ ಎಬ್ಬಿಸಿ, ಕ್ಲಿನಿಕ್ ನ ಸಿಬ್ಬಂದಿಗೆ  ಹಲ್ಲೆ ನಡೆಸಿದ ಆರೋಪಿ ಪೊಲೀಸ್ ವಶಕ್ಕೆ

ಪುತ್ತೂರು: ಪುತ್ತೂರು ದರ್ಬೆಯಲ್ಲಿರುವ ಇ.ಎನ್.ಟಿ ಕ್ಲಿನಿಕ್ ನಲ್ಲಿ ದಾಂಧಲೆ ಎಬ್ಬಿಸಿ, ಕ್ಲಿನಿಕ್ ನ ಸಿಬ್ಬಂದಿ ಶ್ರೀಕಾಂತ್ ಎಂಬವರಿಗೆ ಹಲ್ಲೆ ನಡೆಸಿ, ಕ್ಲಿನಿಕ್ ನ ಪೀಠೋಪಕರಣಗಳಿಗೆ  ಹಾನಿ ಉಂಟು ಮಾಡಿದ ಆರೋಪದಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಡಾ|ರಾಮಮೋಹನ್ ಎಂಬವರ ದೂರಿನಂತೆ,  ಸದ್ರಿಯವರ ಇ.ಎನ್.ಟಿ ಕ್ಲಿನಿಕ್ ನಲ್ಲಿ ಸಲಹೆಗೆ ಬಂದ ವ್ಯಕ್ತಿಗಳು ಕ್ಯೂನಲ್ಲಿ ಕಾಯುತ್ತಿರುವಾಗ, ಹೊರಗಡೆ ಪಾರ್ಕಿಂಗ್ ಶುಲ್ಕ  ಪಡೆದುಕೊಳ್ಳುವ ವ್ಯಕ್ತಿ ಕ್ಲಿನಿಕ್ ನ ಒಳಗೆ ಬಂದು ಆತನ ಪರಿಚಯದವರನ್ನು ಬೇಗನೆ ಒಳಗೆ ಕಳುಹಿಸಲಿಲ್ಲ  ಎಂಬ ಕಾರಣವನ್ನು ನೆಪವಾಗಿಟ್ಟು ದಾಂಧಲೆ ಎಬ್ಬಿಸಿ, ಕ್ಲಿನಿಕ್ ನ ಸಿಬ್ಬಂದಿ ಶ್ರೀಕಾಂತ್ ಎಂಬವರಿಗೆ ಹಲ್ಲೆ ನಡೆಸಿ, ಕ್ಲಿನಿಕ್ ನ ಪೀಠೋಪಕರಣಗಳಿಗೆ  ಹಾನಿ ಉಂಟುಮಾಡಿ ಹೊರಗಡೆ ಕಾಯುತ್ತಿದ್ದ ಇತರ ರೋಗಿಗಳಿಗೆ ಭಯ ಉಂಟು ಮಾಡಿ, ಅವ್ಯಾಚವಾಗಿ ಬೈದು ಅಲ್ಲಿಂದ ಹೋಗಿದ್ದು ಆರೋಪಿ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬುದಾಗಿ ತಿಳಿದು ಬಂದಿದೆ. ಆರೋಪಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 116/2025  ಕಲಂ: ಕಲಂ-329(3), 324(4), 115(2), 352, 351(2) BNS -2023  ಮತ್ತು ಕಲಂ: 3(a) Karnataka  Prohibition of Violence against  Medical Service Personnel and Damage to Property in Medicare Service Institutions  Act 2009 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!