ಹಾಂಕಾಂಗ್ ಬೆಂಕಿ ದುರಂತ ಮೃತರ ಸಂಖ್ಯೆ 130ಕ್ಕೆ ಏರಿಕೆ
ಹಾಂಕಾಂಗ್: ಹಾಂಕಾಂಗ್‌ನ ತೈಪೊ ಜಿಲ್ಲೆಯ ವಾಂಗ್‌ಫುಕ್ ಕೋರ್ಟ್ ಎಸ್ಟೇಟ್‌ನ ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಮೃತರ ಸಂಖ್ಯೆ ಕನಿಷ್ಠ 130ಕ್ಕೆ ಏರಿಕೆಯಾಗಿದ್ದು ಇನ್ನೂ ಹಲವು ಮಂದಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಬುಧವಾರ 7 ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ ಬೆಂಕಿ ಆವರಿಸಿದ್ದು ನಿರಂತರ ಕಾರ್ಯಾಚರಣೆಯ
ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೊನೆಗೊಳಿಸಲಾಗಿದೆ. ನರಹತ್ಯೆಯ ಶಂಕೆಯ ಮೇಲೆ ನಿರ್ಮಾಣ ಕಂಪೆನಿಯ ಮೂವರು ಕಾರ್ಯನಿರ್ವಾಹಕರನ್ನು ಬಂಧಿಸಲಾಗಿದೆ ಎನ್ನಲಾಗಿದೆ.




