ಪುತ್ತೂರು: ಇ.ಎನ್.ಟಿ ಕ್ಲಿನಿಕ್ ಸಿಬ್ಬಂದಿಗೆ ಹಲ್ಲೆ
ಪುತ್ತೂರು: ನಗರದ ದರ್ಬೆ ಗಣೇಶ್ ಕಾಂಪ್ಲೆಕ್ಸ್ ನಲ್ಲಿರುವ ಇಎನ್ ಟಿ ಕ್ಲಿನಿಕ್ ನ ಸಿಬಂದಿಯ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ, ಕ್ಲಿನಿಕ್ ನ ಪೀಠೋಪಕರಣಗಳಿಗೆ ಹಾನಿ ಮಾಡಿರುವ ಘಟನೆ ನ.29ರಂದು ಬೆಳ್ಳಂಬೆಳಗ್ಗೆ ನಡೆದಿದೆ.
ಇ ಎನ್ ಟಿ ಕ್ಲಿನಿಕ್ ಗೆ ದಿನಂಪ್ರತಿ ನೂರಾರು ಮಂದಿ ಚಿಕಿತ್ಸೆ ಗೆ ಇಲ್ಲಿಗೆ ಬರುತ್ತಿದ್ದು ಮುಂಜಾನೆ 6 ಗಂಟೆಯಿಂದಲೇ ಕ್ಲಿನಿಕ್ ಗೆ ಬಂದು ಟೋಕನ್ ಪಡೆಯುತ್ತಿರುತ್ತಾರೆ.. ಶನಿವಾರ ಬೆಳಗ್ಗೆ 6.30 ರ ಹೊತ್ತಿಗೆ ವ್ಯಕ್ತಿಯೋರ್ವ ಬಂದು ಆತನ ಪರಿಚಯಸ್ಥರನ್ನು ವೈದ್ಯರ ಬಳಿ ಬೇಗ ಕಳುಹಿಸದಿರದನ್ನು ಪ್ರಶ್ನಿಸಿದ್ದಾನೆ. ನಂಬರ್ ಪ್ರಕಾರ ಕಳುಹಿಸುವುದಾಗಿ ಸಿಬಂದಿ ಹೇಳಿದ್ದು ಇದಕ್ಕೆ ವ್ಯಕ್ತಿಯು ದಾಂಧಲೆ ಎಬ್ಬಿಸಿದಲ್ಲದೇ ಸಿಬಂದಿ ಶ್ರೀಕಾಂತ್ ನ ಮೇಲೆ ಹಲ್ಲೆ ನಡೆಸಿದ್ದಾನೆ.
ಕ್ಲಿನಿಕ್ ನ ಸ್ವತ್ತುಗಳ ಮೇಲೆ ಹಾನಿ ಮಾಡಿದ್ದಾನೆ. ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಾಳು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ್ದಾರೆ.





