ಕರಾವಳಿ

ಪರಿಸರ ಜಾಗೃತಿಗಾಗಿ ಸೈಕಲ್ ಏರಿ 20 ರಾಜ್ಯಗಳನ್ನು ಸುತ್ತಾಡಿ ಜಾಗೃತಿ ಮೂಡಿಸಿದ ಶಿಕ್ಷಕ: ಪ್ರತಿನಿತ್ಯ 20 ಕಿ.ಮೀ ಪಯಣದಲ್ಲಿ ಸುಳ್ಯಕ್ಕೆ ಆಗಮಿಸಿದ 65 ವರ್ಷದ ವ್ಯಕ್ತಿಯನ್ನು ಸ್ವಾಗತಿಸಿದ ಸುಳ್ಯದ ಗಣ್ಯರು



ಪರಿಸರ ಮಾಲಿನ್ಯದ ಜಾಗೃತಿಗಾಗಿ ಸೈಕಲ್ ಏರಿ ಕಳೆದ 18 ವರ್ಷಗಳಿಂದ ಸುಮಾರು 20 ರಾಜ್ಯವನ್ನು ಸುತ್ತಾಡಿ ಸುಳ್ಯಕ್ಕೆ ತಲುಪಿದ ಅನ್ಬುಚಾರ್ಲ್ಸ್ ರನ್ನು ಮಾರ್ಚ್ ಒಂದರಂದು ಸುಳ್ಯದಲ್ಲಿ ಸ್ವಾಗತಿಸಲಾಯಿತು.


ತಮಿಳುನಾಡಿನ ನಾಮಕಲ್ ನಿವಾಸಿಯಾಗಿರುವ
65 ವರ್ಷ ಪ್ರಾಯದ ಅವಿವಾಹಿತ ಚಾರ್ಲ್ಸ್ ಕಳೆದ ಏಳು ವರ್ಷಗಳಿಂದ ಸೈಕಲ್ ಮೂಲಕ 20 ರಾಜ್ಯಗಳಲ್ಲಿ ಸಂಚರಿಸಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಿದ್ದಾರೆ.


ವಿವಿಧ ರಾಜ್ಯಗಳ ನೂರಾರು ಶಾಲೆಗಳಿಗೆ ಭೇಟಿಕೊಟ್ಟು ಪರಿಸರ ಜಾಗೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ ಇವರು 60 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಸೈಕಲ್ ನಲ್ಲಿ ಕ್ರಮಿಸಿಸಿರುತ್ತಾರೆ.



ಶಿಕ್ಷಕನಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಸಂದರ್ಭ ಪರಿಸರ ಮಾಲಿನ್ಯ ತಡೆಗಟ್ಟುವಿಕೆಗಾಗಿ ದೇಶ ಪರ್ಯಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಛಲದಿಂದ ಜಾಗೃತಿ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.


ಪರ್ಯಟನೆ ಬಗ್ಗೆ ವಿವರ ನೀಡಿದ ಅವರು ಈಗಾಗಲೇ 20 ರಾಜ್ಯಗಳಲ್ಲಿ ಪರ್ಯಟನೆ ಮುಗಿಸಿ ವಿವಿಧ ಶಾಲೆಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಸರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ.


25 ವರ್ಷಗಳ ಹಿಂದೆ ಉಚಿತವಾಗಿ ಪ್ರಕೃತಿಯಿಂದ ದೊರೆಯುತ್ತಿದ್ದ ಕುಡಿಯುವ ನೀರು ಇಂದು ಲೀಟರಿಗೆ 20 ರೂಪಾಯಿ ಕೊಟ್ಟು ಕುಡಿಯುವಂತಹ ಸ್ಥಿತಿ ಬಂದಿದೆ.
ಪ್ರಕೃತಿಯ ಮೇಲೆ ಮನುಷ್ಯ ಮಾಡುವ ಅತ್ಯಾಚಾರ ಇದೇ ರೀತಿ ಮುಂದುವರಿದರೆ ಭವಿಷ್ಯ ಊಹಿಸಲು ಅಸಾಧ್ಯ.
ಇಂದಿನ ಜಾಗತಿಕ ಉಷ್ಣಾಂಶ ಮನುಷ್ಯನ ರೋಗಗಳಿಗೆ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮುಂದಿನ ಜನಾಂಗವನ್ನು ರಕ್ಷಿಸಲು ನಾವು ಕಟಿಬದ್ಧರಾಗ ಬೇಕಾಗಿದೆ ಎಂದು ಅವರು ಹೇಳಿದರು.

ತಮ್ಮ ಪರ್ಯಟನೆಯ ಬಗ್ಗೆ ಹೇಳಿದ ಅವರು ನೇಪಾಳ ಗಡಿಯಲ್ಲಿ ಸಂಚರಿಸುವಾಗ ನಕ್ಸಲರ ಕಹಿಘಟನೆ ಬಿಟ್ಟರೆ ಬೇರೆ ಎಲ್ಲಿಯೂ ಭಾಷೆ, ಆಹಾರ ತೊಡಕಾಗಲಿಲ್ಲ ಎಲ್ಲವೂ ನಿರಾತಂಕ ಅನ್ನುತ್ತಾರೆ.



ಚಾರ್ಲ್ಸ್ ರವರು ಇನ್ನೂ ಎಂಟು ರಾಜ್ಯಗಳ ಪ್ರವಾಸ ಮಾಡಲಿದ್ದು ಅದರೊಂದಿಗೆ ಇವರ ಪರಿಸರ ಮಾಲಿನ್ಯದ ಜಾಗೃತಿಯ ಸೈಕಲ್ ಯಾತ್ರೆ ಮುಕ್ತಾಯಗೊಳ್ಳಲಿದೆ.
ಇದರ ಹೆಗ್ಗಳಿಕೆ ಪಾತ್ರರಾಗುವ ಅನ್ಬು ಚಾರ್ಲ್ಸ್ ರವರ ನಿಜವಾದ ಕನಸು ನನಸಾಗಲಿ ಎಂಬುವುದೇ ಎಲ್ಲರ ಆಶಯವಾಗಿದೆ.

Leave a Reply

Your email address will not be published. Required fields are marked *

error: Content is protected !!