ಕಿರುಕುಳ, ಹಲ್ಲೆಯಿಂದ ನೊಂದು ಪೈಂಟರ್ ಆತ್ಮಹತ್ಯೆ-ಪುತ್ರಿಯ ದೂರು: ಪ್ರಕರಣ ದಾಖಲು
ಪುತ್ತೂರು: ವಾಹನಗಳ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಇಡ್ಡಿದು ನಿವಾಸಿ ಹರೀಶ್ ಎಂಬವರು, ಕಿರುಕುಳ ಮತ್ತು ಹಲ್ಲೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೀಶ್ ರವರು ವಾಹನಗಳ ಪೈಂಟಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದರು. ಅದೇ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹೇಮಂತ್ ಆಚಾರ್ಯ ಎಂಬವರು ಕೆಲವು ದಿನಗಳಿಂದ ಹರೀಶ್ ಅವರಿಗೆ ವಿನಾಕಾರಣ ಬೈಯ್ಯುವುದು, ಮಾನಸಿಕ ಕಿರುಕುಳು ನೀಡುವುದು ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಆರೋಪಿಯು ಹರೀಶ್ ರವರಿಗೆ ಹಲ್ಲೆ ಮಾಡಿ ತಲ್ವಾರ್ ಹಿಡಿದು, ಜೀವ ಬೆದರಿಕೆ ಹಾಕಿದ್ದು ಈ ವಿಚಾರವನ್ನು ಹರೀಶ್ ಅವರು ತನ್ನ ಮಗಳಿಗೆ ತಿಳಿಸಿದ್ದು ಇದೇ ವಿಚಾರದಲ್ಲಿ ಮನನೊಂದು ತಂದೆಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹರೀಶ್ ಅವರ ಪುತ್ರಿ ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ ರವರ ಆತ್ಮಹತ್ಯೆ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದ್ದು ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಪುತ್ತೂರು ನಗರ ಠಾಣೆಗೆ ವರ್ಗಾಯಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.





