ಅಂತಾರಾಷ್ಟ್ರೀಯಕ್ರೈಂ

ನೈಜೀರಿಯಾ: ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಶಾಲೆಗೆ ನುಗ್ಗಿ ಮಕ್ಕಳ ಅಪಹರಣ



ನೈಜೀರಿಯಾದ ಪಶ್ಚಿಮ ಪ್ರಾಂತದಲ್ಲಿನ ಕೆಥೊಲಿಕ್ ಶಾಲೆಯ ಮೇಲೆ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ ಶಸ್ತ್ರಸಜ್ಜಿತ ವ್ಯಕ್ತಿಗಳು ಹಲವು ಮಕ್ಕಳನ್ನು ಮತ್ತು ಸಿಬ್ಬಂದಿಯನ್ನು ಅಪಹರಿಸಿರುವುದಾಗಿ ವರದಿಯಾಗಿದೆ.


ಅಗ್ವಾರಾ ಪ್ರದೇಶದ ಶಾಲೆಯ ಮೇಲೆ ಶುಕ್ರವಾರ ಬೆಳಗ್ಗೆ ದಾಳಿ ನಡೆಸಲಾಗಿದ್ದು 52 ಶಾಲಾ ಮಕ್ಕಳನ್ನು ಅಪಹರಿಸಲಾಗಿದೆ. ಮಾಹಿತಿ ತಿಳಿದೊಡನೆ ಮಿಲಿಟರಿ ಮತ್ತು ಭದ್ರತಾ ಪಡೆಗಳನ್ನು ಪ್ರದೇಶಕ್ಕೆ ರವಾನಿಸಲಾಗಿದ್ದು ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ವಾಯವ್ಯ ನೈಜೀರಿಯಾದ ಕೆಬ್ಬಿರಾಜ್ಯದ ಪ್ರೌಢಶಾಲೆಯ 25 ವಿದ್ಯಾರ್ಥಿನಿಯರನ್ನು ಅಪಹರಿಸಲಾಗಿತ್ತು. ಇದೀಗ ಮತ್ತೊಂದು ಶಾಲೆಯಿಂದ ಅಪಹರಣ ನಡೆದಿದೆ.

Leave a Reply

Your email address will not be published. Required fields are marked *

error: Content is protected !!