ಪಾಣೆಮಂಗಳೂರು: ಎಂಡಿಎಂಎ ಸಹಿತ ಮೊಹಮ್ಮದ್ ಇಮ್ತಿಯಾಜ್ ಬಂಧನ
ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ಒಂದು ಅಟೋದಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ಇರುವ ಬಗ್ಗೆ ಮಾಹಿತಿ ಬಂದಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಅ.15ರಂದು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿಲಾಗಿ ಸ್ಮಶಾನದ ಪಕ್ಕ ಆಟೋರಿಕ್ಷಾದ ಒಳಗೆ ಚಾಲಕ ಸೀಟಿನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆ ವ್ಯಕ್ತಿಯು ಈ ಹಿಂದೆ ಬಂಟ್ವಾಳ ನಗರ ಪೊಲೀಸು ಠಾಣೆಯಲ್ಲಿ ದಾಖಲಾದ ಅ.ಕ್ರ 50/2025 ಪ್ರಕರಣದಲ್ಲಿ ಆರೋಪಿಯಾಗಿದ್ದು ಮೊಹಮ್ಮದ್ ಇಮ್ತಿಯಾಜ್ (40) ಎಂದು ತಿಳಿದು ಬಂದಿದೆ.

ಆತನನ್ನು ಮತ್ತಷ್ಟು ವಿಚಾರಿಸಿದಾಗ ನನ್ನ ಜೊತೆಯಲ್ಲಿ ಎಂ.ಡಿ.ಎಂ.ಎ ಇದ್ದು, ತಾನು ಅದನ್ನು ಸೇವಿಸಲು ಇಲ್ಲಿ ಬಂದಿರುವುದಾಗಿ ತಿಳಿಸಿದ್ದು, ಒಟ್ಟು 0.760 ಗ್ರಾಂ [760 ಮಿಲಿಗ್ರಾಂ] ಸಿಕ್ಕಿದ್ದು, ಎಂ.ಡಿ.ಎಂ.ಎ ಮಾದಕ ಸ್ವತ್ತಿನ ಅಂದಾಜು ಮೌಲ್ಯ ರೂ. 1,000/- ಆಗಬಹುದು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ: 117/2025 ಕಲಂ :8 [c] 22(b) NDPS ACT 1985. ಯಂತೆ ಪ್ರಕರಣ ದಾಖಲಾಸಿಕೂಂಡು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.



