ಕರ್ನಾಟಕ ಫಾಳಿಲಾ-ಫಳೀಲಾ ಸಿ.ಎಸ್.ಡಬ್ಲ್ಯೂಸಿ ಪ್ರತಿನಿಧಿ ಸಂಗಮ
ಪುತ್ತೂರು : ‘ಸಮಸ್ತ’ ದ ಅಧೀನದ ಫಾಳಿಲಾ-ಫಳೀಲಾ ವುಮೆನ್ಸ್ ಕಾಲೇಜ್ ಗಳ ಕರ್ನಾಟಕ ಸಿ.ಎಸ್.ಡಬ್ಲ್ಯೂ. ಸಿ. ಇದರ ಪ್ರತಿನಿಧಿಗಳ ಸಂಗಮವು ಪುತ್ತೂರು ‘ಸುನ್ನಿ ಮಹಲ್’ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಿ.ಎಸ್.ಡಬ್ಲ್ಯೂ. ಸಿ.ಕೇಂದ್ರೀಯ ಮಂಡಳಿಯ ಸಾಂಘಿಕ ಉಸ್ತುವಾರಿ ಜುನೈದ್ ಮಲಪ್ಪುರಂ ಮಾತನಾಡಿ , ಮಂಡಳಿಯ ಹೊಸ ಶೈಕ್ಷಣಿಕ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಮಾಹಿತಿ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಿ.ಎಸ್.ಡಬ್ಲ್ಯೂ.ಸಿ ಕರ್ನಾಟಕ ಇದರ ಅಧ್ಯಕ್ಷ ಅಶ್ರಫ್ ಹಾಜಿ ಸಿಟಿ ಉಪ್ಪಿನಂಗಡಿ ಅವರು ವಹಿಸಿದ್ದರು. ಸಮಾರಂಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಸಯ್ಯಿದ್ ತ್ವಾಹ ಜಿಫ್ರಿ ತಂಙಳ್ ಬೆಳ್ತಂಗಡಿ, ಕೋಶಾಧಿಕಾರಿ ದಾವುದ್ ಹನೀಫಿ ಮಿತ್ತಬೈಲು, ಪರೀಕ್ಷಾ ಬೋರ್ಡ್ ಐ.ಟಿ.ಚೆಯರ್ ಮ್ಯಾನ್ ಬಾತಿಷಾ ಅಝ್ಹರಿ ಉಪ್ಪಿನಂಗಡಿ, ಕನ್ವಿನರ್ ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ, ಪ್ರಮುಖರಾದ ಉವೈಸ್ ಮದನಿ ಅಡ್ಯಾರ್ ಕಣ್ಣೂರು,ಅಬ್ದುರ್ರಹ್ಮಾನ್ ಫೈಝಿ ಕೆಮ್ಮಾರ, ಹನೀಫಿ ಸಜಿಪ ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ವಂದಿಸಿದರು.



