ಸಿಡಿಲು ಬಡಿದು ಮನೆಗೆ ಭಾರೀ ಹಾನಿ-ಸುಟ್ಟು ಕರಕಲಾದ ವಯರಿಂಗ್
ಪುತ್ತೂರು: ಸಿಡಿಲು ಬಡಿದು ಮನೆಯ ವಯರಿಂಗ್ ಸಂಪೂರ್ಣ ಸುಟ್ಟುಹೋಗಿ, ಮನೆಗೂ ಹಾನಿ ಸಂಭವಿಸಿದ ಘಟನೆ ಸರ್ವೆ ಗ್ರಾಮದ ಪಟ್ಟೆಮಜಲು ಎಂಬಲ್ಲಿ ಅ.12ರಂದು ನಡೆದಿದೆ.

ಪಟ್ಟೆಮಜಲು ನಿವಾಸಿ ಆನಂದ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣವಾಗಿ ಸುಟ್ಟು ಹೋಗಿದೆ, ಮನೆಯ ಗೋಡೆಗೂ ಹಾನಿ ಸಂಭವಿಸಿದ್ದು ಇನ್ವರ್ಟರ್ ಹಾಗೂ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದೆ. ಅದೃಷ್ಟ ವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ರೂ.೨ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಮುಂಡೂರು ಗ್ರಾಮ ಸಹಾಯಕ ಹರ್ಷಿತ್ ನೇರೋಳ್ತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ, ಅಶೋಕ್ ಎಸ್.ಡಿ, ಉಮೇಶ್ ಎಸ್.ಡಿ ಮೊದಲಾದವರು ಭೇಟಿ ನೀಡಿದ್ದಾರೆ.



