ಅರಂಬೂರು: ಪಾಲಡ್ಕದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಬೊಲೆರೋ ಢಿಕ್ಕಿ
ನಿರ್ಮಾಣ ಹಂತದ ಅಂಗಡಿ ಕಟ್ಟಡಕ್ಕೆ ಬೊಲೆರೋ ಜೀಪ್ ಢಿಕ್ಕಿ ಹೊಡೆದು ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಅರಂಬೂರಿನ ಪಾಲಡ್ಕದಲ್ಲಿ ಮೇ.11ರಂದು ಸಂಜೆ ನಡೆದಿದೆ.

ಪಾಲಡ್ಕದಲ್ಲಿ ನಿರ್ಮಾಣ ಹಂತದ ಅಂಗಡಿ ಕಟ್ಟಡಕ್ಕೆ ಮಡಿಕೇರಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಬೊಲೆರೋ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದ್ದು, ಚಾಲಕ ಸೇರಿದಂತೆ ಇಬ್ಬರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.