ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ನ್ನು ಬೊಲೆರೋ ವಾಹನದಲ್ಲಿ ಅಡ್ಡಗಟ್ಟಿ ಜೀವ ಬೆದರಿಕೆ; ಪ್ರಕರಣ ದಾಖಲು
ಪುತ್ತೂರು: ಅ.12ರ ರಾತ್ರಿ 12:30 ಗಂಟೆ ವೇಳೆಗೆ, ಪಡ್ನೂರು ಗ್ರಾಮದ ಕಾರ್ಲ ಶ್ರೀರಾಮ ಭಜನಾ ಮಂದಿರದ ಬಳಿ, ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ನ್ನು ಬೊಲೆರೋ ವಾಹನ ಹಿಂಬದಿಯಿಂದ ಓವರ್‌ಟೇಕ್ ಮಾಡಿ ರಸ್ತೆಗೆ ಅಡ್ಡಗಟ್ಟಿ ಅಕ್ರಮವಾಗಿ ತಡೆದ ಘಟನೆ ನಡೆದಿದೆ.

ಅಂಬುಲೆನ್ಸ್‌ನಲ್ಲಿ ಮೃತಪಟ್ಟ ಬಾಲಕಿಯ ಶವವಿದ್ದು, ಮೃತರ ಕುಟುಂಬಸ್ಥರು ಗಾಯಗೊಂಡ ಪರಿಸ್ಥಿತಿಯಲ್ಲಿದ್ದರು. ಆದರೆ ಆರೋಪಿತರು ಅಂಬುಲೆನ್ಸ್‌ನಲ್ಲಿದ್ದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವಿನಾಶ್ ಎಂ. ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 91/2025 ಕಲಂ:126(2), 352, 351 (2), ಜೊತೆಗೆ 3(5) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



