ಕರಾವಳಿಕ್ರೈಂ

ನಿಖಾಹ್ ಕಾರ್ಯಕ್ರಮದಲ್ಲಿ ಹಲ್ಲೆ, ಪ್ರಕರಣ ದಾಖಲು-ಓರ್ವ ವಶಕ್ಕೆ

ಪುತ್ತೂರು: ಶಬೀರ್‌ (ಚಬ್ಬಿ) ಅವರ ನಿಖಾಹ್ ಕಾರ್ಯಕ್ರಮದಲ್ಲಿ ಗಲಾಟೆ ನಡೆದ ವಿಚಾರದಲ್ಲಿ ಪರಸ್ಪರ ಹಲ್ಲೆ ನಡೆದ ಬಗ್ಗೆ ಪ್ರಕರಣ ದಾಖಲಾಗಿದೆ.

ಶಬೀರ್‌ ಯಾನೆ ಚಬ್ಬಿ ಅವರ ನಿಖಾಹ್ ಕಾರ್ಯಕ್ರಮಕ್ಕೆ ಅಬುಸಾಲಿ ಆದಂ ಕುಂಞ ಅವರು ಹೋದಾಗ, ಅಬ್ದುಲ್‌ ರಹಿಮಾನ್‌ ಅವರ ಪ್ರಚೋದನೆಗೆ ರೈಯೀಸ್‌ ಎಂಬವರು ರಾಡ್‌ನಿಂದ ಹಣೆಗೆ ಹೊಡೆದು ಗಾಯಪಡಿಸಿದ್ದು, ಇತರ ಆರೋಪಿಗಳು ಸೇರಿ ಅಬುಸಾಲಿ ಆದಂ ಕುಂಞ ಅವರನ್ನು ನೆಲಕ್ಕೆ ದೂಡಿ ತುಳಿದು, ಕಲ್ಲು ಎಸೆದು ಕಾಲಿಗೆ ಗಾಯಪಡಿಸಿದ್ದಾರೆ. ಶಬೀರ್‌ ಅವರ ಮದುವೆಗೆ ಅಬುಸಾಲಿ ಆದಂ ಕುಂಞ ಸಹಕರಿಸಿದ್ದೇ ಘಟನೆಯ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2025  ಕಲಂ: 118(1),115(2) , 351(2) r/w 190 BNS-2023 ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಅಹಮದ್ ರಈಸ್ ನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಪ್ರಕರಣಕ್ಕೆ ಸಂಬಂದಿಸಿದಂತೆ ಅಹಮದ್ ರಈಸ್ ರವರು ತನಗೆ ಅಲ್ಲಿ ಇದ್ದವರು ಸೇರಿ ಹಲ್ಲೆ ಮಾಡಿದ್ದಾರೆಂದು ಪ್ರತಿ ದೂರನ್ನು ನೀಡಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ   ಅ.ಕ್ರ: 144/2025 ಕಲಂ:352, 118(1), 115(2), 351(2) r/w 3(5) BNS-2023 ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!