ಕರಾವಳಿಕ್ರೈಂ

ಉಪ್ಪಿನಂಗಡಿ: ಕೋಳಿ ಅಂಕಕ್ಕೆ ದಾಳಿ, ಮೂವರ ಬಂಧನ



ಉಪ್ಪಿನಂಗಡಿ: ಅನಧಿಕೃತ ಕೋಳಿ ಅಂಕಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಬಜತ್ತೂರು ಗ್ರಾಮದ ಮಣಿಕ್ಕಳದಲ್ಲಿ ವರದಿಯಾಗಿದೆ.

ಸಾಂದರ್ಭಿಕ ಚಿತ್ರ


ಕಡಬ ನಿವಾಸಿ ಸತೀಶ್(38), ಬಂಟ್ವಾಳ ನಿವಾಸಿ ಮುರಳಿ(30) ಹಾಗೂ ಪುತ್ತೂರು ನಿವಾಸಿ ಮೋನಪ್ಪ ಕೆ. (36) ಬಂಧಿತ ಆರೋಪಿಗಳು. ಇವರಿಂದ ಐದು ಹುಂಜಗಳು.
ಮೋಟಾರ್ ಸೈಕಲ್, ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ಸುತೇಶ್ ಕೆ.ಪಿ. ಮಂಗಳವಾರ ಸಂಜೆ ತನ್ನ ಸಿಬ್ಬಂದಿಯೊಂದಿಗೆ ಮಣಿಕ್ಕಳ ಕಡೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೋಳಿ ಅಂಕ ನಡೆಯುತ್ತಿರುವುದು ತಿಳಿದು ಬಂದಿತ್ತು.

Leave a Reply

Your email address will not be published. Required fields are marked *

error: Content is protected !!