ಏಷ್ಯಾ ಕಪ್ ಗೆದ್ದ ಟೀಂ ಇಂಡಿಯಾಗೆ ಭರ್ಜರಿ ಗಿಫ್ಟ್ ಘೋಷಿಸಿದ ಬಿಸಿಸಿಐ
ನವದೆಹಲಿ: ಏಷ್ಯಾ ಕಪ್ ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯ ಸಿಬ್ಬಂದಿಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಿದೆ.

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳಲ್ಲೂ ಗೆದ್ದಿರುವ ಟೀಮ್ ಇಂಢಿಯಾ ಅಮೋಘ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಇದೀಗ ಗೆಲುವಿನ ಸಂಭ್ರಮದ ಮಧ್ಯೆ ಬಿಸಿಸಿಐ, ಟೀಂ ಇಂಡಿಯಾ ಆಟಗಾರರು ಹಾಗೂ ಸಹಾಯ ಸಿಬ್ಬಂದಿಗೆ ಬರೋಬ್ಬರಿ ರೂ.21 ಕೋಟಿ ರೂ ನಗದು ಬಹುಮಾನ ಘೋಷಿಸಿದೆ.
ಇನ್ನು ಟೂರ್ನಿ ಬಹುಮಾನ ಮೊತ್ತವಾಗಿ ಭಾರತಕ್ಕೆ 2.3 ಕೋಟಿ ಲಭಿಸಿತ್ತು. ರನ್ನರ್ ಅಪ್ ಪಾಕಿಸ್ತಾನಕ್ಕೆ ಏಷ್ಯಾ ಕ್ರಿಕೆಟ್ ಮಂಡಳಿಯಿಂದ 1.3 ಕೋಟಿ ರೂ. ಬಹುಮಾನ ದೊರೆಯಿತು.