ಟಿ20 ವಿಶ್ವ ಕಪ್: ಬೌಲಿಂಗ್ ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ನ್ಯೂಝಿಲ್ಯಾಂಡ್ ತಂಡದ ಫಗ್ರ್ಯೂಸನ್
ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ, ಪಪುವಾ ನ್ಯೂಗಿನಿ ತಂಡವನ್ನು 7 ವಿಕೆಟ್ ಅಂತರದಿಂದ ಸೋಲಿಸಿದೆ. ಈ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ಮಧ್ಯಮ ವೇಗದ ಬೌಲರ್ ಲೂಕಿ ಫಗ್ರ್ಯೂಸನ್ ಅತ್ಯಂತ ಮಿತವ್ಯಯದ ಬೌಲರ್ ಎಂಬ ವಿಶ್ವದಾಖಲೆ ನಿರ್ಮಿಸುವ ಮೂಲಕ ಟಿ20 ವಿಶ್ವಕಪ್‍ನಲ್ಲಿ ದಾಖಲೆ ಬರೆದಿದ್ದಾರೆ.
ಟ್ರಿನಿಡಾಡ್‍ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆದ್ದರೂ ಕೂಡಾ ನ್ಯೂಝಿಲ್ಯಾಂಡ್ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಸಿ ಗುಂಪಿನಿಂದ ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಸೂಪರ್8 ಹಂತ ತಲುಪಿವೆ.
ಫಗ್ರ್ಯೂಸನ್ ಅವರು ತಾವು ಎಸೆದ ಎಲ್ಲ ನಾಲ್ಕೂ ಓವರ್ ಮೇಡನ್ ಮಾಡಿದ್ದು ಮೂರು ವಿಕೆಟ್ ಕೂಡಾ ಪಡೆದಿದ್ದಾರೆ(4-4-0-3) ಆ ಮೂಲಕ ಪಿಎನ್‍ಜಿ ತಂಡ 19.4 ಓವರ್ ಗಳಲ್ಲಿ ಕೇವಲ 78 ರನ್‍ಗಳಿಗೆ ಆಲೌಟ್ ಆಯಿತು ನ್ಯೂಝಿಲ್ಯಾಂಡ್ ತಂಡ 3 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು.