ಕೈಬರಹದ ಮೂಲಕ ಪವಿತ್ರ ಕುರ್‌ಆನ್ ಬರೆದ ಫಾತಿಮತ್ ಅಬೀರಾಗೆ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಸನ್ಮಾನ
ಪುತ್ತೂರು: ಕೈಬರಹದ ಮೂಲಕ ಪವಿತ್ರ ಕುರ್‌ಆನ್ ಬರೆದು ದಾಖಲೆ ನಿರ್ಮಿಸಿರುವ ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ವಿದ್ಯಾರ್ಥಿನಿ. ಉಪ್ಪಿನಂಗಡಿ ಹಳೆಗೇಟು ಬಳಿಯ ಹೈದರ್ ಅಲಿ ಮತ್ತು ಉಮೈಬಾ ದಂಪತಿಗಳ ಪುತ್ರಿ ಫಾತಿಮತ್ ಅಬೀರ ಅವರನ್ನು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಅ.4ರಂದು ಸನ್ಮಾನಿಸಿ ಗೌರವಿಸಲಾಯಿತು.

ಶರ್ಪುನ್ನಿಸಾ ಕಂಕನಾಡಿ ಮತ್ತು ಆತಿಕಾ ರಫೀಕ್ ಅವರು ಫಾತಿಮತ್ ಅಬೀರ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಪ್ರತಿನಿಧಿ, ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡಿ ಫಾತಿಮತ್ ಅಬೀರಾ ಅವರು ಮಾಡಿರುವ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಸನ್ಮಾನಿಸಿದ್ದು ಅವರ ಶ್ರಮ, ತ್ಯಾಗ ಮತ್ತು ಕುರ್‌ಆನ್ ಬಗೆಗಿನ ಒಲವು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಹ್ಮದ್ ಸಯೀದ್ ಕಂಕನಾಡಿ, ಅಬ್ದುಲ್ ರಹಿಮಾನ್ ಯುನಿಕ್, ಫಾತಿಮತ್ ಅಬೀರಾ ಅವರ ತಂದೆ ಹೈದರ್ ಅಲಿ, ಅಬ್ದುಲ್ ಖಾದರ್(ಹುದವಿ ವಿದ್ಯಾರ್ಥಿ) ಉಪಸ್ಥಿತರಿದ್ದರು