ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ
ಬೆಂಗಳೂರು: ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾತುಗಳಿಂದಲೇ ಫೇಮಸ್ ಆಗಿರುವ ರಕ್ಷಿತಾ ಶೆಟ್ಟಿ ಇದೀಗ ಇನ್ನಷ್ಟು ಜನಪ್ರಿಯತೆ ಗಳಿಸಲಿದ್ದಾರೆ.

ಮುಂಬೈನಲ್ಲಿ ಬೆಳೆದಿರುವ ಕಾರಣ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಮಾತನಾಡಲು ಸ್ವಲ್ಪ ಕಷ್ಟವಾಗುತ್ತದೆ. ಈ ಕಾರಣದಿಂದಲೇ ರಕ್ಷಿತಾ ಶೆಟ್ಟಿ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತಿದ್ದರು. ಜನರು ತಮ್ಮನ್ನು ಟ್ರೋಲ್ ಮಾಡಿದರೂ ರಕ್ಷಿತಾ ಶೆಟ್ಟಿ ಮಾತ್ರ ಕನ್ನಡ ಮಾತನಾಡೋದನ್ನು ನಿಲ್ಲಿಸಿರಲಿಲ್ಲ.
ರಕ್ಷಿತಾ ಶೆಟ್ಟಿಗೆ ಕನ್ನಡ ಸರಿಯಾಗಿ ಬರಲ್ಲ. ಕನ್ನಡ ಸರಿಯಾಗಿ ಬರದಿದ್ದರೂ, ಕನ್ನಡದಲ್ಲೂ ರಕ್ಷಿತಾ ಶೆಟ್ಟಿ ವ್ಲಾಗ್ಸ್ ಮಾಡುತ್ತಾರೆ. ಬರೀ ಕನ್ನಡ ಅಲ್ಲ.. ತುಳು, ಹಿಂದಿ, ಇಂಗ್ಲೀಷ್‌ನಲ್ಲಿ ವ್ಲಾಗ್ಸ್, ರೀಲ್ಸ್ ಮಾಡುತ್ತಿರುತ್ತಾರೆ.