ಇಂಗ್ಲೆಂಡ್ ವಿರುದ್ದ ಅತ್ಯಮೋಘ ಕ್ಯಾಚ್ ಹಿಡಿದ ಟೀಂ ಇಂಡಿಯಾದ ಮೊಹಮ್ಮದ್ ಸಿರಾಜ್ ರನ್ನು ಹೊಗಳಿದ ಸಚಿನ್ ತೆಂಡೂಲ್ಕರ್
ಇಂಗ್ಲೆಂಡ್ ವಿರುದ್ಧ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಈ ಪಂದ್ಯದಲ್ಲಿ 4ನೇ ಇನಿಂಗ್ಸ್ನ 64ನೇ ಓವರನ್ನು ರವೀಂದ್ರ ಜಡೇಜಾ ಎಸೆದಿದ್ದು ಆ ಓವರಿನ 5ನೇ ಎಸೆತವನ್ನು ಜೋಶ್ ಟಂಗ್ ಡೀಪ್ ಮಿಡ್ ವಿಕೆಟ್ನತ್ತ ಬಾರಿಸಲು ಯತ್ನಿಸಿದ್ದರು. ಈ ವೇಳೆ ಸಿಲ್ಲಿ ಮಿಡ್ ಆನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಮೊಹಮ್ಮದ್ ಸಿರಾಜ್ ಅಮೋಘ ಡೈವಿಂಗ್ ನೊಂದಿಗೆ ಚೆಂಡನ್ನು ಕ್ಯಾಚ್ ಹಿಡಿದರು. ಆ ಕ್ಯಾಚ್ ಅದ್ಭುತ ಮತ್ತು ಸಮಯೋಚಿತವಾಗಿತ್ತು.

ಈ ಪಂದ್ಯದಲ್ಲಿ 336 ರನ್ ಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಪ್ರದರ್ಶನವನ್ನು ಶ್ಲಾಘಿಸಿದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಸಿರಾಜ್ ಅವರ ಕ್ಯಾಚ್ ಅನ್ನು ಕೊಂಡಾಡಿದ್ದಾರೆ. ಸಿರಾಜ್ ಅವರ ಕ್ಯಾಚ್ ನ್ನು ‘ಜಾಂಟಿ’ ಸಿರಾಜ್ ಎಂದು ಹೊಗಳಿದ್ದಾರೆ. ಆ ಮೂಲಕ ಸಿರಾಜ್ ಅವರ ಕ್ಯಾಚ್ ಭಾರೀ ಸದ್ದು ಮಾಡಿದ್ದು ಭಾರತದ ಗೆಲುವಿನಲ್ಲೂ ಪಾತ್ರ ವಹಿಸಿದೆ.