ರಾಷ್ಟ್ರೀಯ

ತನ್ನ ರಕ್ತವನ್ನು ಮಾರಾಟ ಮಾಡಿ ಸ್ಮಾರ್ಟ್ ಪೋನ್ ಖರೀದಿಸಿದ 16 ವರ್ಷದ ಹುಡುಗಿ!

ಕೋಲ್ಕತ: ಆತಂಕಕಾರಿ ಘಟನೆಯೊಂದರಲ್ಲಿ ಸ್ಮಾರ್ಟ್​ ಪೋನ್​ ಖರೀದಿಸುವ ಸಲುವಾಗಿ ಪಶ್ಚಿಮ ಬಂಗಾಳದ ದಿನಾಜ್​ಪುರ ಮೂಲದ 16 ವರ್ಷದ ಹುಡುಗಿಯೊಬ್ಬಳು ತನ್ನ ರಕ್ತವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ.

File Photo

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯು ದಕ್ಷಿಣ ದಿನಾಜ್​ಪುರದ ತಾಪನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರ್ಡಾದ ನಿವಾಸಿ. ಆನ್​ಲೈನ್​ನಲ್ಲಿ 9 ಸಾವಿರ ರೂ. ಮೌಲ್ಯದ ಸ್ಮಾರ್ಟ್​ಫೋನ್​ ಅನ್ನು ಆರ್ಡರ್​ ಮಾಡಿದ್ದಳು. ಆದರೆ, ಅಷ್ಟೊಂದು ಹಣವನ್ನು ವ್ಯವಸ್ಥೆ ಮಾಡುವುದು ಕಷ್ಟ ಎಂದು ತಿಳಿದಿತ್ತು. ಹೀಗಾಗಿ ರಕ್ತ ಮಾರಾಟ ಮಾಡಲು ನಿರ್ಧಾರ ಮಾಡಿದ ವಿದ್ಯಾರ್ಥಿನಿ, ಬಲುರ್ಘಾಟ್​ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿ ರಕ್ತವನ್ನು ನೀಡಿದ್ದಾಳೆ.

ವಿದ್ಯಾರ್ಥಿನಿಯು ರಕ್ತದಾನಕ್ಕೆ ಬದಲಾಗಿ ಹಣಕ್ಕೆ ಬೇಡಿಕೆ ಇಟ್ಟಾಗ ನಮಗೆ ಅನುಮಾನ ಬಂದಿತು. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಶಿಶುಪಾಲನಾ ವಿಭಾಗಕ್ಕೆ ಮಾಹಿತಿ ನೀಡಲಾಯಿತು. ಅವರು ಆಸ್ಪತ್ರೆಗೆ ಆಗಮಿಸಿ, ವಿಚಾರಿಸಿದಾಗ ವಿದ್ಯಾರ್ಥಿನಿಯ ಮೊಬೈಲ್​ ಬಯಕೆಯ ನಿಜವಾದ ಕಾರಣ ತಿಳಿಯಿತು ಎಂದು ಬ್ಲಡ್ ಬ್ಯಾಂಕ್ ಉದ್ಯೋಗಿ ಕನಕ್ ದಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಕ್ಕಳ ಆರೈಕೆ ಸದಸ್ಯೆ ರೀಟಾ ಮಹ್ತೋ ಪ್ರಕಾರ, ವಿದ್ಯಾರ್ಥಿನಿಯ ಬಳಿ ಕಾರಣವನ್ನು ಕೇಳಿದಾಗ, ಸ್ಮಾರ್ಟ್​ ಫೋನ್ ಶೀಘ್ರದಲ್ಲೇ ಡೆಲಿವರಿ ಆಗುತ್ತಿದೆ. ನನ್ನ ಬಳಿ ಹಣವಿಲ್ಲ. ಹೀಗಾಗಿ ಹಣವನ್ನು ಸಂಗ್ರಹಿಸಲು ರಕ್ತವನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದಾಗಿ ತಿಳಿಸಿದಳು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!