ಪುತ್ತೂರು: ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ
ಪುತ್ತೂರು’ ಎಸ್ ಡಿ ಪಿ ಐ 17ನೇ ಸಂಸ್ಥಾಪನಾ ದಿನಾಚರಣೆ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಷೇತ್ರಾಧ್ಯಕ್ಷರಾದ ಅಶ್ರಫ್ ಬಾವು ಅಧ್ಯಕ್ಷತೆಯಲ್ಲಿ ನಡೆಯಿತು.

ಧ್ವಜಾರೋಹಣವನ್ನು ನೆರವೇರಿಸಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಉಪಾಧ್ಯಕ್ಷರೂ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೂನಿಶ್ ಅಲಿ ಮಾತನಾಡಿ ಈ ಸಂಸ್ಥಾಪನಾ ದಿನದಂದು ದ್ವೇಷ ರಾಜಕೀಯ, ಮನುವಾದಿಗಳ ಶೋಷಣೆ ಮತ್ತು ಫ್ಯಾಶಿಸ್ಟ್ ಧೋರಣೆಗಳ ವಿರುದ್ಧ ನಮ್ಮ ಹೋರಾಟವನ್ನು ತೀವ್ರಗೊಳಿಸುವ ಸಂಕಲ್ಪವನ್ನು ನಾವು ಮಾಡಬೇಕಾಗಿದೆ. MK ಫೈಝಿಯಂತಹ ನಾಯಕರ ಬಿಡುಗಡೆಗಾಗಿ ಮತ್ತು UAPA, ED ದುರ್ಬಳಕೆಯ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುವುದರೊಂದಿಗೆ ಸರ್ಕಾರದ ಷಡ್ಯಂತ್ರದ ವಿರುದ್ಧ ಜನ ಜಾಗೃತಿ ಮೂಡಿಸಬೇಕಾಗಿದೆ.
ಈ ದಿನವು ಭಾರತದ ಶೋಷಿತ, ವಂಚಿತ ಮತ್ತು ಹಿಂದುಳಿದ ವರ್ಗಗಳಿಗೆ ಸಮಾನತೆ ಮತ್ತು ನ್ಯಾಯದ ಆಶಯವನ್ನು ಮತ್ತಷ್ಟು ಬಲಪಡಿಸುವ ಸಂದರ್ಭವಾಗಿದೆ. SDPIಯ ಎಲ್ಲಾ ಕಾರ್ಯಕರ್ತರು, ಸದಸ್ಯರು ಮತ್ತು ಹಿತೈಷಿಗಳಿಗೆ ಸಂಸ್ಥಾಪನಾ ದಿನದ ಶುಭಾಶಯಗಳೊಂದಿಗೆ ಒಗ್ಗಟ್ಟಿನೊಂದಿಗೆ, ಸಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಮುಂದುವರಿಯೋಣ ಎಂದು ಸಂದೇಶ ಭಾಷಣ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಕೆದಿಲ ಪಕ್ಷ ಆರಂಭಕ್ಕೆ ಮುಂಚಿತವಾಗಿ ಅನ್ಯಾಯ, ಅಕ್ರಮ ಅನಾಚಾರ, ಕೋಮು ದ್ವೇಷಗಳು ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದ್ದ ಸಮಯದಲ್ಲಿ ಪಕ್ಷದ ಉದಯವಾಗಿದ್ದು ಹೋರಾಟ, ತ್ಯಾಗ, ನ್ಯಾಯ ಮತ್ತು ಸಮಾನತೆ ಮತ್ತು ಧರ್ಮ ನಿರಪೇಕ್ಷತೆ ಎಂಬ ಅಡಿಗಲ್ಲಿನ ಮೇಲೆ ಪಕ್ಷ ಸ್ಥಾಪನೆಯಾಗಿದೆ ಇವತ್ತಿಗೂ ಈ ಪಕ್ಷವು ತನ್ನ ಮೂಲ ತತ್ವಗಳಲ್ಲಿ ದೃಢವಾಗಿ ನಿಂತಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಹಮೀದ್ ಸಾಲ್ಮರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಬಾವು ವಹಿಸಿದ್ದರು.
ಈ ಸಂದರ್ಭದಲ್ಲಿ ಸಯ್ಯದ್ ಮಲೆ ಜುಮಾ ಮಸೀದಿ ಅಧ್ಯಕ್ಷರಾದ ಡಾ. ಶಂಸುದ್ದೀನ್ ಸಾಲ್ಮರ, ಪುತ್ತೂರು ನಗರಸಭೆ ಸದಸ್ಯರಾದ ಫಾತಿಮಾ ಝಹರ, ಪುತ್ತೂರು ನಗರ ಸಮಿತಿ ಅಧ್ಯಕ್ಷರಾದ ಯಹ್ಯಾ ಕೆ. ಎಚ್, ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಕಾರ್ಯಕ್ರಮದ ಉಸ್ತುವಾರಿ ರಜಾಕ್ ಸಾಲ್ಮರ ಊರಿನ ಹಿರಿಯ ವ್ಯಕ್ತಿ ಪುತ್ತಬ್ಬಾ, ಅನ್ಸಾರುದ್ದೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಾಜುದ್ದೀನ್ ಸಾಲ್ಮರ ಸ್ವಾಗತಿಸಿ, ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಾರ್ಯಕ್ರಮವನ್ನು ನಿರೂಪಿಸಿದರು, ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಜ್ ಬಳಕ್ಕ ಧನ್ಯವಾದಗೈದರು.