ಕುರಿಯ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿ ಮಾದರಿಯಾದ ಬೂಡಿಯಾರ್ ಪುರುಷೋತ್ತಮ ರೈ
ಪುತ್ತೂರು: ಭೂ ನ್ಯಾಯ ಮಂಡಳಿ ಸದಸ್ಯರು, ಆರ್ಯಾಪು ಗ್ರಾ.ಪಂ ಸದಸ್ಯರೂ ಆಗಿರುವ ಬೂಡಿಯಾರ್ ಪುರುಷೋತ್ತಮ ರೈ ಅವರಿಂದ ಕುರಿಯ ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ ಕಾರ್ಯಕ್ರಮ ಜೂ.19ರಂದು ಶಾಲೆಯಲ್ಲಿ ನಡೆಯಿತು.

ಪುಸ್ತಕ ವಿತರಿಸಿದ ಬೂಡಿಯಾರು ಪುರುಷೋತ್ತಮ ರೈ ಮಾತನಾಡಿ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಪುಸ್ತಕ ಖರೀದಿಸಲು ಸಮರ್ಥರಿದ್ದಾರೆ, ಆದರೂ ಅನೇಕ ಮಕ್ಕಳ ಮನೆಯಲ್ಲಿ ಕಷ್ಟವಿದೆ ಎಂದು ತಿಳಿದುಕೊಂಡಿದ್ದೇನೆ, ಈ ನಿಟ್ಟಿನಲ್ಲಿ ನಾನು ಎಲ್ಲ ಮಕ್ಕಳಿಗೂ ಪುಸ್ತಕ ವಿತರಿಸುತ್ತಿದ್ದೇನೆ ಎಂದು ಹೇಳಿದರು.
ನಾನು ಅಗರ್ಭ ಶ್ರೀಮಂತನೇನಲ್ಲ, ದೇವರು ಕೊಟ್ಟ ಸಂಪತ್ತಿನಲ್ಲಿ ಸಣ್ಣ ಅಂಶವನ್ನು ಸಮಾಜಕ್ಕೂ ಕೊಡುತ್ತಾ ಬಂದಿದ್ದೇನೆ, ಪ್ರಾಮಾಣಿಕವಾಗಿ ಗಳಿಸಿದ ಹಣದಿಂದ ನಾನು ನನ್ನಿಂದಾದ ಸಮಾಜ ಸೇವೆಯನ್ನು ಮಾಡುತ್ತಿದ್ದೇನೆ ಎಂದರು.
ಸ್ವಾಗತಿಸಿ ಪ್ರಸ್ತಾವನೆಗೈದ ಶಾಲಾ ಪ್ರಭಾರ ಮುಖ್ಯಗುರು ನವೀನ್ ಕುಮಾರ್ ಮಾತನಾಡಿ ಮಕ್ಕಳ ಶಿಕ್ಷಣದ ವಿಚಾರದಲ್ಲಿ ಕಾಳಜಿ ವಹಿಸಿ ಪ್ರತೀ ವರ್ಷ ಪುಸ್ತಕ ವಿತರಣೆ ಮಾಡುತ್ತಿರುವ ಬೂಡಿಯಾರ್ ಪುರುಷೋತ್ತಮ ರೈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ಬೂಡಿಯಾರ್ ಪುರುಷೋತ್ತಮ ರೈ ನೇರ ನಡೆನುಡಿಯವರಾಗಿದ್ದು ಬಡವರ ಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದಾರೆ, ಜನರ ಸೇವೆ ಮಾಡಲು ಮನಸ್ಸು ಮುಖ್ಯ, ಆ ಮನಸ್ಸು ಬೂಡಿಯಾರ್ ಪುರುಷೋತ್ತಮ ರೈಯವರಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುರಿಯ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ ನಮ್ಮ ಶಾಲೆಗೆ ಅನೇಕ ವರ್ಷಗಳಿಂದ ಪುಸ್ತಕ ವಿತರಿಸುತ್ತಿರುವ ಬೂಡಿಯಾರ್ ಪುರುಷೋತ್ತಮ ರೈಯವರು ನಿಜವಾಗಿಯೂ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿದ್ದಾರೆ, ಶಾಲೆಗೆ ನಿರಂತರ ಸಹಕಾರ ಕೊಡುತ್ತಿರುವ ಅವರಿಗೆ ನಾವು ಆಭಾರಿಯಾಗಿದ್ದೇವೆ ಎಂದರು.
ಶಾಲಾ ನಾಯಕಿ ಹಿನಾ ಫಾತಿಮಾ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಕವಿತಾ ಪಿ.ಎನ್ ವಂದಿಸಿದರು. ಶಿಕ್ಷಕಿ ದಿವ್ಯಜ್ಯೋತಿ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ನಳಿನಿ ಕೆ ಹಾಗೂ ಕಾವ್ಯ ಸಹಕರಿಸಿದರು. 74 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.