ಪೊಯ್ಯತ್ತಬೈಲ್ ಅಂದು ನಿಧನಕ್ಕೆ ಎಸ್.ವೈ.ಎಸ್.ಸಂತಾಪ
ಕಳೆದ ಇಪ್ಪತ್ತೈದು ವರ್ಷಗಳಿಂದ ಸೊಂಟದ ಕೆಳಗೆ ಸಂಪೂರ್ಣ ನಿಶ್ಚಲಗೊಂಡು ಮಲಗಿದ್ದಲ್ಲೇ ಇದ್ದರೂ ಧಾರ್ಮಿಕ ಬೋಧನಾ ಚಟುವಟಿಕೆಗಳಲ್ಲಿ ಅಂತರ್ಜಾಲ ಮಾಧ್ಯಮದ ಮೂಲಕ ಅದ್ಭುತ ಸೇವೆಗಳನ್ನು ಮಾಡುತ್ತಿದ್ದ ಅಂದು ಪೊಯ್ಯತ್ತಬೈಲ್ (43) ಅವರ ನಿಧನಕ್ಕೆ ಸುನ್ನೀ ಯುವಜನ ಸಂಘ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಸಂತಾಪ ಸೂಚಿಸಿದ್ದಾರೆ.

ಸುನ್ನೀ ಕಾರ್ಯಕರ್ತರಿಗೆ ಸದಾ ಸ್ಪೂರ್ತಿಯಾಗಿದ್ದ ಅಂದು, ಲಭ್ಯವಿರುವ ಅವಕಾಶಗಳನ್ನು ಬಳಸಿ ದಅ್‌ವಾ ರಂಗದಲ್ಲಿ ತುಂಬಿ ನಿಂತು ಸರ್ವಜನರ ಪ್ರೀತಿ, ಅಭಿಮಾನವನ್ನು ಗಳಿಸಿದ ಅಪೂರ್ವ ಸೌಭಾಗ್ಯವಂತನಾಗಿದ್ದರು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಸುನ್ನೀ ಕಾರ್ಯಕರ್ತರು ಅವರ ಹೆಸರಲ್ಲಿ ಖುರ್‌ಆನ್, ತಹ್‌ಲೀಲ್ ಹದ್ಯಾ ಮಾಡಿ ಪ್ರಾರ್ಥಿಸುವಂತೆ ಹಾಗೂ ಅವರಿಗಾಗಿ ಮಯ್ಯಿತ್ ನಮಾಝ್ ಮಾಡುವಂತೆ ಎಸ್.ವೈ.ಎಸ್.ವಿನಂತಿ ಮಾಡಿದೆ