ಕರಾವಳಿ

ವಾಸಿಸಲು ಸ್ವಂತ ಮನೆಯಿಲ್ಲ, ಮಗಳ ಮದುವೆಗೆ ಕೈಯಲ್ಲಿ ನಯಾ ಪೈಸೆ ಇಲ್ಲ: ಪಂಜಳದ ಈ ಕುಟುಂಬದ ಕಣ್ಣೀರೊರೆಸಲು ಬೇಕಿದೆ ದಾನಿಗಳ ನೆರವು



ಪುತ್ತೂರು: ಒಂದು ಕಡೆ ಕಿತ್ತು ತಿನ್ನುವ ಬಡತನ. ಇನ್ನೊಂದು ಕಡೆ ಮಗಳನ್ನು ಮದುವೆ ಮಾಡಿಕೊಡಬೇಕಾದ ಸನ್ನಿವೇಶ. ಮೊದಲೇ ವಾಸಿಸಲು ಸ್ವಂತ ಮನೆಯಿಲ್ಲ. ಇರುವ ಬಾಡಿಗೆ ಮನೆಗೂ ಸರಿಯಾಗಿ ಬಾಡಿಗೆ ಕೊಡಲು ಸಾಧ್ಯವಾಗದ ಪರಿಸ್ಥಿತಿ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಕಣ್ಣೀರಿಡುತ್ತಿರುವ ಕುಟುಂಬವೊಂದು ಪುತ್ತೂರು ತಾಲೂಕಿನ ಮುಕ್ವೆ ಜಮಾಅತಿಗೊಳಪಟ್ಟ ಪಂಜಳದಲ್ಲಿದೆ.

ಮನೆಯ ಯಜಮಾನನ ಹೆಸರು ಹಮೀದ್ ಕೆ.ಎಂ. ಮೂಲತ: ಮಾಡಾವು ನಿವಾಸಿಯಾಗಿರುವ ಇವರು ಅನೇಕ ವರ್ಷಗಳಿಂದ ಪಂಜಳದಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಹಿರಿಯ ಮಗಳನ್ನು ಈಗಾಗಲೇ ಮದುವೆ ಮಾಡಿ ಕೊಟ್ಟಿದೆ. ಪಂಜಳದ ಮನೆಯಲ್ಲಿ ಪತ್ನಿ ಮತ್ತು ಕಿರಿಯ ಪುತ್ರಿಯೊಂದಿಗೆ ಹಮೀದ್ ಕಷ್ಟದ ಜೀವನ ಸಾಗಿಸುತ್ತಿದ್ದಾರೆ.

ಇದೀಗ ಕಿರಿಯ ಮಗಳ ಮದುವೆ ಮಾರ್ಚ್ 5ರಂದು ನಡೆಸುವುದೆಂದು ದಿನಾಂಕ ನಿಗದಿಯಾಗಿದೆ. ಮದುವೆಗೆ ಸಾಕಷ್ಟು ಖರ್ಚು ವೆಚ್ಚಗಳಿದ್ದು ಮಗಳ ಮದುವೆ ಕಾರ್ಯವನ್ನು ಹೇಗೆ ನರವೇರಿಸಲಿ ಎನ್ನುವ ಚಿಂತೆಯಲ್ಲಿ ಹಮೀದ್ ದಂಪತಿ ನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ.

ಹಮೀದ್ ಅವರಿಗೆ 50 ವರ್ಷ ವಯಸ್ಸು. ಆರೋಗ್ಯವೂ ಸರಿಯಿಲ್ಲ. ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿ ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಮಗಳ ಮದುವೆಗೆ ದಿನ ಹತ್ತಿರ ಬರುತ್ತಿದ್ದು ಅನ್ಯ ದಾರಿ ಕಾಣದೇ ಕಂಗಾಲಾಗಿ ಹೋಗಿದ್ದು ದಾನಿಗಳ ಸಹಾಯ ಯಾಚಿಸಿದ್ದಾರೆ.

ಸಹೃದಯಿ ದಾನಿಗಳು ಮನಸ್ಸು ಮಾಡಿದರೆ ನೊಂದು ಕಣ್ಣೀರು ಸುರಿಸುತ್ತಿರುವ ಕುಟುಂಬವೊಂದರ ಕಣ್ಣೀರೊರೆಸಲು ಸಾಧ್ಯವಿದೆ. ಮಗಳ ಮದುವೆಗೆ ನಯಾ ಪೈಸೆ ಕೈಯಲ್ಲಿ ಇಲ್ಲದೇ ಕೊರಗುತ್ತಿರುವ ಹಮೀದ್ ಕುಟುಂಬಕ್ಕೆ ನೆರವು ನೀಡುವವರು ಈ ಕೆಳಗೆ ಕೊಟ್ಟಿರುವ ಬ್ಯಾಂಕ್‌ ಖಾತೆಗೆ ಅಥವಾ Gpay/Phonepe ಗೆ ತಮ್ಮಿಂದಾಗುವ ಧನ ಸಹಾಯವನ್ನು ಮಾಡಬಹುದಾಗಿದೆ

Name: Bushra
A/C No: 70820100000047
IFSC code: BARB0VJDAPU
Bank: Bank of Baroda
Branch: Darbe puttur Gpay/Phonepay: 9900564743

ಹೆಚ್ಚಿನ ಮಾಹಿತಿಗಾಗಿ ಹಮೀದ್ (ಮೊ: 9611809755)ನಂಬರನ್ನು ಸಂರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!