ಕ್ರೈಂರಾಜ್ಯ

ಡಿಕೆ ಸುರೇಶ್ ಸಹೋದರಿ ಎಂದು ನಂಬಿಸಿ ಚಿನ್ನ ಖರೀದಿಸಿ ವಂಚನೆ: ಆರೋಪಿ ದಂಪತಿ ಅರೆಸ್ಟ್

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್‌ ಸಹೋದರಿ ಸೋಗಿನಲ್ಲಿ ಜುವೆಲರ್ಸ್‌ನಿಂದ 14 ಕೆ.ಜಿ. ಚಿನ್ನ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ
ಐಶ್ವರ್ಯ, ಆಕೆಯ ಪತಿ ಹರೀಶ್‌ ನನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದಾರೆ ಎನ್ನಲಾದ ನಟ ಧರ್ಮೇಂದ್ರ ಅವರಿಗೆ ಶೋಧ ಮುಂದುವರಿದಿದೆ.


ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಐಶ್ವರ್ಯ, ಆಕೆಯ ಪತಿ ಹರೀಶ್‌ ಹಾಗೂ ಧರ್ಮೇಂದ್ರನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು. ಶನಿವಾರ ವಿಚಾರಣೆಗೆ ಹಾಜರಾದ ವೇಳೆ ಐಶ್ವರ್ಯ, ಹರೀಶ್‌ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಸಿಕ್ಕಿದ ಹಿನ್ನೆಲೆ ಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್‌ ಪರೀಕ್ಷೆಗೆ ಒಳಪಡಿಸಿದೆ. ಬಳಿಕ ಪೊಲೀಸರು ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ದಂಪತಿಯನ್ನು ಸೋಮವಾರ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!