ಮುಂಡೂರು: ಜಯಶ್ರೀ ಹತ್ಯೆಗೆ ತಿಂಗಳ ಹಿಂದೆಯೇ ಹೊಂಚು ಹಾಕಿದ್ದ ಉಮೇಶ್..!
ಪುತ್ತೂರು: ಮುಂಡೂರು ಸಮೀಪದ ಕಂಪ ಬದಿಯಡ್ಕ ದಲ್ಲಿ ಮನೆಗೆ ನುಗ್ಗಿ ಯುವತಿಯೋರ್ವಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಪೋಲೀಸರು ತನಿಖೆಗೆ ಒಳಪಡಿಸಿದ್ದು ಈ ವೇಳೆ ಕೆಲವೊಂದು ಅಂಶಗಳು ಬೆಳಕಿಗೆ ಬಂದಿದೆ.
ಆರೋಪಿ ಉಮೇಶ್ ಜಯಶ್ರೀಯವರನ್ನು ಕೊಲೆ ಮಾಡಲು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದು ಅದಕ್ಕಾಗಿ ನರಿಮೊಗರು ಗ್ರಾಮದ ಪುರುಷರಕಟ್ಟೆಯ ಅಂಗಡಿಯೊಂದರಿಂದ ಚೂರಿ ಖರೀದಿಸಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಏಕಾಏಕಿ ಜಯಶ್ರೀ ಮನೆಗೆ ಬಂದು ಚೂರಿಯಿಂದ ಜಯಶ್ರೀಗೆ ಇರಿದ ಆರೋಪಿ ಬಳಿಕ ತನ್ನ ಸ್ಕೂಟರ್ ಮೂಲಕ ಪುತ್ತೂರಿಗೆ ತೆರಳಿದ್ದ. ಅಲ್ಲಿಂದ ತಲೆ ಮೆರೆಸಿಕೊಳ್ಳುವ ಪ್ರಯತ್ನ ನಡೆಸಿದ್ದನಾದರೂ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಬಂಧನಕ್ಕೊಳಗಾಗಿದ್ದ.
ಕಂಪದ 22 ವರ್ಷದ ಯುವತಿ ಜಯಶ್ರೀ ಎಂಬವರನ್ನು ಜ.17ರಂದು ಸುಳ್ಯ ಕನಕಮಜಲಿನ ಉಮೇಶ್ ಕೊಲೆ ನಡೆಸಿದ್ದ.
ಉಮೇಶ ಜಯಶ್ರೀಯನ್ನು ಕೆಲವು ಸಮಯಗಳಿಂದ ಪ್ರೀತಿಸುತಿದ್ದು ಇತ್ತೀಚೆಗೆ ಜಯಶ್ರೀ ಅವರು ಉಮೇಶನ ಜೊತೆ ಮಾತನಾಡದೆ ದೂರವಾಗಿದ್ದಳು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಉಮೇಶ ಜಯಶ್ರೀ ಮನೆಗೆ ನುಗ್ಗಿ ಹತ್ಯೆ ಮಾಡಿದ್ದ.