ಬೆಳ್ತಂಗಡಿ: ಕಾಡಾನೆ ದಾಳಿ, ವ್ಯಕ್ತಿ ಸ್ಥಳದಲ್ಲೇ ಸಾವು
ಬೆಳ್ತಂಗಡಿ: ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಓರ್ವ ವ್ಯಕ್ತಿ ಆನೆ ದಾಳಿಗೆ ಬಲಿಯಾದ ಘಟನೆ ಜು. 17 ರಂದು ನಡೆದಿದೆ.

ಮೃತ ವ್ಯಕ್ತಿ ಸೌತಡ್ಕದ ನಿವಾಸಿ ಬಾಲಕೃಷ್ಣ ಶೆಟ್ಟಿ(60) ಎಂದು ತಿಳಿದುಬಂದಿದೆ.
ಕಾಡಾನೆಯ ಹಿಂಡು ಈ ಪ್ರದೇಶದಲ್ಲಿ ಓಡಾಟ ನಡೆಸಿದ್ದು ಇದನ್ನು ಗಮನಿಸಿದ ಸ್ಥಳೀಯರು ಆನೆಯನ್ನು ಓಡಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳಿಯ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.



