ಪುತ್ತೂರು: ಕಾರು ಅಪಘಾತದಲ್ಲಿ ಮೂವರು ಮೃತ್ಯು, ಶಾಸಕ ಅಶೋಕ್ ರೈ ಸಂತಾಪ
ಪುತ್ತೂರಿನ ಬೈಪಾಸ್ ರಸ್ತೆಯ ಬಳಿ ಡಿ.28ರಂದು ಮುಂಜಾನೆ ನಡೆದ ಕಾರು ಅಪಘಾತದಲ್ಲಿ ಸುಳ್ಯ ಜಟ್ಟಿಪಲ್ಲದ ಮೂವರು ಮೃತಪಟ್ಟಿದ್ದು ಘಟನೆಯ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಸಂತಾಪ ಸೂಚಿಸಿದ್ದಾರೆ.
ಇದು ಅತ್ಯಂತ ದುಖದ ವಿಚಾರ, ಪೂಜೆ ಮುಗಿಸಿ ಮನೆಗೆ ತೆರಳುವ ವೇಳೆ ಈ ದುರಂತ ನಡೆದಿದೆ, ಘಟನೆಯು ಅತ್ಯಂತ ದುಖದ ವಿಚಾರವಾಗಿದ್ದು ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.