ಸುಳ್ಯ ಅನ್ಸಾರಿಯ ಎಜುಕೇಷನ್ ಸೆಂಟರ್ ಗೆ ಖ್ಯಾತ ಪಂಡಿತ ಪೇರೋಡ್ ಉಸ್ತಾದ್ ಭೇಟಿ
ಸುಳ್ಯ: ಕೊಟ್ಯಾಡಿ ಸಿರಾಜುಲ್ ಹುದಾ ಶಿಕ್ಷಣ ಸಂಸ್ಥೆಯ ಸ್ಥಾಪಕರು, ಹಿರಿಯ ವಿಧ್ವಾಂಸರು ಆದ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿಯವರು ನ.28ರಂದು ಸಂಜೆ ಜಟ್ಟಿಪಳ್ಳ ಅನ್ಸಾರಿಯಾ ಎಜುಕೇಷನ್ ಸೆಂಟರ್ ಗೆ ಭೇಟಿ ನೀಡಿ, ನೂತನ ವಾಗಿ ನಿರ್ಮಾಣಗೊಂಡಿರುವ ಗಲ್ಫ್ ಆಡಿಟೋರಿಯಂ ಕಟ್ಟಡ ವೀಕ್ಷಣೆ ನಡೆಸಿದರು.
ಸಂಸ್ಥೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಮಾತನಾಡಿ ‘ಸಮಾಜ ಮತ್ತು ಸಮಾಜದ ಮುಖಂಡರುಗಳು,ಮತ್ತು ನೀವು ಶಿಕ್ಷಣ ಪಡೆಯುವ ಸಂಸ್ಥೆಯವರು ನಿಮ್ಮನ್ನು ಪ್ರೀತಿಸಲು ನಿಮ್ಮ ಕಲಿಕೆ ಮತ್ತು ದೀನಿ ವಿದ್ಯಾಭ್ಯಾಸ ಕಾರಣವಾಗಿದೆ.
ಆದ್ದರಿಂದ ವಿದ್ಯಾರ್ಥಿಗಳಾದ ನಿಮ್ಮನ್ನು ಬಹಳ ಗೌರವದಿಂದ ಕಾಣುತ್ತಾರೆ. ಈ ವಿಶ್ವಾಸವನ್ನು ನೀವು ಉಳಿಸಿ ನಿಮ್ಮ ಜೀವನವನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕೆಂದು ಹೇಳಿದರು.
ಸಂಸ್ಥೆ ವತಿಯಿಂದ ಉಸ್ತಾದ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯಧರ್ಶಿ ಲತೀಫ್ ಹರ್ಲಡ್ಕ, ಕಟ್ಟಡ ಸಮಿತಿ ಅಧ್ಯಕ್ಷ ಅಬ್ದುಲ್ ಕಾದರ್ ಪಟೇಲ್, ಕೋಶಾಧಿಕಾರಿ ಎಸ್ ಎಂ ಹಮೀದ್, ಗಲ್ಫ್ ಕಮಿಟಿ ಸದಸ್ಯರುಗಳಾದ ಇಬ್ರಾಹಿಂ ನಡುಬೈಲು, ಅಹಮದ್ ಸಿ ಎ, ರಶೀದ್ ವಿ ಕೆ, ಮುನೀರ್ ವಿ ಕೆ, ಬಶೀರ್ ಇಂದ್ರಾಜೆ,ಹಾಜಿ ಅಬ್ದುಲ್ ಶುಕೂರು, ಗಾಂಧಿನಗರ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್,ಮದರಸ ಉಸ್ತುವಾರಿ ಹಮೀದ್ ಬೀಜಕೊಚ್ಚಿ, ಹಾಜಿ ಮುಸ್ತಫಾ ಕೆ ಎಂ, ಹಿರಿಯ ಉದ್ಯಮಿ ಅಬೂಬಕ್ಕರ್ ಬಿ ಎಂ, ಮಹಮ್ಮದ್ ಕೆ ಬಿ, ಹಾಜಿ ಆದಂ ಕಮ್ಮಾಡಿ, ಅಬ್ದುಲ್ ಗಫ್ಫಾರ್ ಸೇರಿದಂತೆ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.