ಸುಳ್ಯ: ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಹಿನ್ನೆಲೆ: ನೂರಾರು ಯುವಕರಿಂದ ಶ್ರಮದಾನ
ಸುಳ್ಯ ತಾಲೂಕಿನ ಸಮುದಾಯದ ಅನಿವಾಸಿ ಭಾರತೀಯರ ಬಹು ದಿನಗಳ ಕನಸು ನನಸಾಗುವ ದಿನ ಹತ್ತಿರ ಬಂದಿದ್ದು ನಾಳೆ(ನ.29)ಆಡಿಟೋರಿಯಂ ಉದ್ಘಾಟನೆಗೊಳ್ಳಲಿದೆ.
ಕಳೆದ ಒಂದು ವಾರಗಳಿಂದ ಸ್ಥಳೀಯರ ನೂರಾರು ಯುವಕರ ಪಡೆ ಕಾರ್ಯಕ್ರಮದ ಯಶಸ್ವಿಗೆ ಶ್ರಮದಾನ ಮಾಡುವ ಮೂಲಕ ಪರಿಸರದ ಸ್ವಚ್ಛತೆ ಮತ್ತು ಅಲಂಕಾರದ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳ ಸರ್ವ ಪದಾಧಿಕಾರಿಗಳು, ಸದಸ್ಯರು ಹಿರಿಯರು, ಕಿರಿಯರು ಎನ್ನದೇ ಪರಿಶ್ರಮ ಪಡುವ ದೃಶ್ಯ ಕಂಡು ಬರುತ್ತಿದ್ದು ಹಬ್ಬದ ವಾತಾವರಣದಂತಿದೆ.
ಪರಿಸರದ ಯುವಕರ ಲವಲವಿಕೆಯ ಶ್ರಮದಾನ,ಸ್ಥಳೀಯ ಯುವಕರೊಂದಿಗೆ ತಾಲೂಕಿನ ಹಲವು ಕಡೆಯ ಯುವಕರು ಕೈಜೋಡಿಸುವಿಕೆ, ಹಿರಿಯರ ಸಹಭಾಗಿತ್ವ. ಅನ್ಸಾರಿಯಾ ಆಡಳಿತ ಸಮಿತಿ ಮತ್ತು ಗಲ್ಫ್ ಕಮಿಟಿಯ ಸದಸ್ಯರ ಸಲಹೆ ಸೂಚನೆ, ಪ್ರಚಾರ ಸಮಿತಿಯ ನಿರಂತರ ಪ್ರಚಾರ,ಇವರಿಗೆ ಸಹಕರಿಸುತ್ತಿರುವ ಅನ್ಸಾರಿಯಾ ಕ್ಯಾಂಪಸ್ ವಿಧ್ಯಾರ್ಥಿಗಳ ಪರಿಶ್ರಮ ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಲಿದೆ.
ಅನ್ಸಾರಿಯಾ ಮಸೀದಿ ಗುರುಗಳ ಮತ್ತು ಅಧ್ಯಾಪಕರ ತಂಡ. ಕಾರ್ಯಕ್ರಮದ ಮೇಲುಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ಸಲಹಾ ಸಮಿತಿಯ ಎಲ್ಲಾ ಸದಸ್ಯರ ಓಡಾಟ. ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದೇಶದಿಂದ ಆಗಮಿಸಿದ ಗಲ್ಫ್ ಸಮಿತಿಯ ಸದಸ್ಯರ ಭಾಗಿಯಾಗುವಿಕೆ ಹಾಗೂ ಕೆಲವು ತಿಂಗಳಿಂದ ನಿರಂತರವಾಗಿ ಆಡಿಟೋರಿಯಂ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಗಲ್ಫ್ ಸಮಿತಿಯ ಸದಸ್ಯರ ಶ್ರಮ ಸಾಥ್ ನೀಡಿದೆ.