ಕರಾವಳಿಕ್ರೈಂ

ತಿಂಗಳಾಡಿ: ಸ್ಕೂಟರ್ ಕಳವು


ಪುತ್ತೂರು: ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್  ಕಳವಾದ ಘಟನೆ ನ.10 ರಂದು ತಿಂಗಳಾಡಿ ಸಮೀಪದ ನಂಜೆ ಎಂಬಲ್ಲಿ ವರದಿಯಾಗಿದೆ. ನಂಜೆ ನಿವಾಸಿ ಎನ್.ಎಮ್ ಮೊಹಮ್ಮದ್ ಎಂಬವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಅವರ ಪುತ್ರ ತ್ವಾಹಾ ಮೊಹಿಯ್ಯುದ್ದೀನ್‌ರವರ ಟಿವಿಎಸ್ ಎಂಟರ್‌ಕ್ಯೂ ಸ್ಕೂಟರ್ ಕಳವು ಆಗಿದೆ.

ನ.10ರಂದು ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ಮನೆಯಂಗಳದಲ್ಲಿರುವ ಶೆಡ್‌ನಲ್ಲಿ ಟಿವಿಎಸ್ ಸ್ಕೂಟರ್ ಅಲ್ಲದೆ ಹೋಂಡಾ ಆಕ್ಟೀವಾ ಸ್ಕೂಟರ್, ಬೈಕ್ ಹಾಗೂ ಓಮ್ನಿ ಕಾರು ಇತ್ತು ಆದರೆ ಕಳ್ಳರು ಕೇವಲ ಟಿವಿಎಸ್ ಸ್ಕೂಟರ್ ಒಂದನ್ನು ಮಾತ್ರ ಕಳವು ಮಾಡಿದ್ದಾರೆ.  ಈ ಬಗ್ಗೆ ಇರ್ಷಾದ್ ನಂಜೆಯವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!