ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದ ಶಾಸಕ ಅಶೋಕ್ ರೈ
ಪುತ್ತೂರು: ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಗಿಡ ನೆಡುವ ಮೂಲಕ ಬೆಳಗಾವಿಯ ಅಧಿವೇಶನದ ಸವಿನೆನಪಿನ ಗುರುತು ಮಾಡಿದರು.
ಹಲಸಿನ ಗಿಡವನ್ನು ಶಾಸಕರು ನೆಡುವ ಮೂಲಕ ತನ್ನ ಪರಿಸರ ಪ್ರೇಮವನ್ನು ಮೆರೆದರು. ಪುತ್ತೂರಿನ ರಸ್ತೆ ಬದಿಗಳಲ್ಲಿ ಕಾಟು ಮಾವಿನ ಗಿಡ ನೆಡುವ ಮೂಲಕ ಸುದ್ದಿಯಾಗಿದ್ದ ಶಾಸಕರು ಬೆಳಗಾವಿಯಲ್ಲಿ ಹಲಸಿನ ಗಿಡ ನೆಡುವ ಮೂಲಕ ಎರಡನೇ ಬಾರಿಗೆ ಸುದ್ದಿಯಾದರು.