ಕರಾವಳಿ

ಬಡಗನ್ನೂರು: ಹಗಲು ಮಂಗಗಳ ಕಾಟ, ರಾತ್ರಿ ಕಾಡು ಹಂದಿಗಳ ಕಾಟ – ಕೃಷಿಕರು ಕಂಗಾಲು



ಪುತ್ತೂರು: ಕಾಡು ಹಂದಿ ನಾಡಿಗೆ ಬಂದು ಕೃಷಿ ನಾಶಪಡಿಸಿದ ಬಗ್ಗೆ ಬಡಗನ್ನೂರು ಗ್ರಾಮದಿಂದ ವರದಿಯಾಗಿದೆ.
ಬಡಗನ್ನೂರು ಗ್ರಾಮದ ಪೇರಾಲು ಪರಿಸರದಲ್ಲಿ ಹೊಲದಲ್ಲಿ ಬೆಳೆದ ಪೈರು ನಾಶಪಡಿಸಿದ್ದು ಅಪಾರ ನಷ್ಟ ಸಂಭವಿಸಿದೆ.


ಕಾಡು ಹಂದಿಗಳು ರಾತ್ರಿ ಹೊತ್ತಿನಲ್ಲಿ ತಮ್ಮ ಮರಿಗಳ ಜೊತೆಗೆ ಗದ್ದೆಯಲ್ಲಿ ಬೆಳೆದ ಪೈರು ನಾಶಪಡಿಸಿದೆ. ಸುಮಾರು 5 ರಿಂದ 6 ಕ್ವಿಂಟಲಗಳಷ್ಷು ನಷ್ಟ ಸಂಭವಿಸಿದೆ.
ಮರಿ ಹಂದಿಗಳ ಜೊತೆಗೆ ಹೊಲಕ್ಕೆ ಬಂದರೆ ಹಂದಿಗಳನ್ನು ಓಡಿಸಲು ಭಯದ ಭೀತಿ ಎದುರಾಗುತ್ತದೆ. ಮರಿ ಜೊತೆಗಿದ್ದರೆ ಜನರು ಹಂದಿಗಳನ್ನು ಓಡಿಸಲು ಭಯಭೀತರಾಗುವುದರಿಂದ ಮತ್ತು ಅದರ ಪಕ್ಕಕೂ ಹೋಗಲು ಹೆದರುತ್ತಾರೆ.


ಹಿಂದಿನ ಕಾಲದ ಹಂದಿಗಳು ಹೊಲಕ್ಕೆ ಅಥವಾ ತೋಟಕ್ಕೆ ಬಂದಲ್ಲಿ ಯಾವುದೇ ತರದ ಸದ್ದು ಮಾಡಿದಾಗ ಹೆದರಿ ಹೋಗುತ್ತಿದವು. ಅದರೆ ಈಗ ಬೇಟೆ ಕಾನೂನಿನ ದೃಷ್ಟಿಯಿಂದ ಅಪರಾಧ ಎಂದು ಸರಕಾರ ಅದೇಶದ ಬಳಿಕ ಬೇಟೆಯಾಡುವುದು ಕೊಂಚಮಟ್ಟಿಗೆ ಕಡಿಮೆಯಾಗಿದೆ.  ಗದ್ದೆಗೆ ಅಥವಾ ತೋಟಕ್ಕೆ ಬಂದಾಗ ಮನುಷ್ಯರು ಹಂದಿಯನ್ನು ಅಟ್ಟಿಸಿಕೊಂಡು ಹೋಗುವ ಸಂದರ್ಭದಲ್ಲಿ ಯಾವ ರೀತಿ ಸದ್ದು ಮಾಡುತ್ತಾರೆ ಎಂಬುದು ಜಾಣತನದಿಂದ ಅಳಿಸುವಷ್ಟು ಸೂಕ್ಷ್ಮ ಜೀವಿಯಾಗಿದೆ. ಇದರಿಂದ ಪಟಾಕಿ ಮತ್ತು ಇನ್ನಿತರ ಸದ್ದುಗಳ ಯಾವುದೇ ಭಯ ಅವುಗಳಿಗಿಲ್ಲ.


ಹಗಲು ಹೊತ್ತಿನಲ್ಲಿ ಮಂಗನ ಕಾಟ:
ಹಗಲು ಮಂಗಗಳ ಹಾವಳಿ, ರಾತ್ರಿ ಹಂದಿಗಳ ಹಾವಳಿ ಒಟ್ಟಾರೆ ರೈತರು ಕಷ್ಟ ಪಟ್ಟು ದುಡಿದು ಫಲ ಸಿಗುವ ಸಂದರ್ಭದಲ್ಲಿ ಕಾಡುಪ್ರಾಣಿಗಳಿಂದ ಕೃಷಿ ನಾಶ ಈ ಬಗ್ಗೆ ಸಂಬಂಧ ಪಟ್ಟ ಇಲಾಖಾದಿಕಾರಿಗಳು ಜನಪ್ರತಿನಿಧಿಗಳು ಗಮನಿಸಿ ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾದ ಕೃಷಿ ನಾಶಕ್ಕೂ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!