ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್‌ನ ಕಛೇರಿ ಉದ್ಘಾಟನೆ: ರಾಜ್ಯಮಟ್ಟದ ದಫ್ ಸ್ಪರ್ಧೆಯ ಅಂಗವಾಗಿ ಆಕರ್ಷಕ ದಫ್ ರ‍್ಯಾಲಿ
ಸುಳ್ಯ: ಪೈಚಾರ್‌ನ ಅಲ್ ಅಮೀನ್ ಯೂತ್ ಸೆಂಟರ್‌ನ ನೂತನ ಕಚೇರಿ ಉದ್ಘಾಟನೆ ಹಾಗೂ ರಾಜ್ಯ
ಮಟ್ಟದ ದಫ್ ಸ್ಪರ್ಧೆಯ ಅಂಗವಾಗಿ ಆಕರ್ಷಕ ದಫ್ ರ್ಯಾಲಿ ನಡೆಯಿತು. ಮೊಗರ್ಪಣೆ ಮಸ್ಜಿದ್ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿಯವರು ದರ್ಗಾ ಝಿಯಾರತ್ ದುವಾ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಬಳಿಕ ಮೊಗರ್ಪಣೆ ಮಸ್ಜಿದ್ ಪರಿಸರದಿಂದ ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ನ ನೂತನ ಕಚೇರಿ ವರೆಗೆ ಆಕರ್ಷಕ ದಫ್ ರ್ಯಾಲಿ ನಡೆಯಿತು.
ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಯೂತ್ ಸೆಂಟರ್ ಅಧ್ಯಕ್ಷ ಸತ್ತಾರ್ ಪೈಚಾರ್ ಅವರಿಗೆ ಸಂಸ್ಥೆಯ ದ್ವಜ ಹಸ್ತಾಂತರಿಸಿ ರ್ಯಾಲಿಗೆ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮದ ಮುಖ್ಯ ಅಂಗವಾದ ನೂತನ ಕಚೇರಿಯ ಉದ್ಘಾಟನೆ ನಡೆಯಿತು. ಬೆಂಗಳೂರು ಉದ್ಯಮಿ ಹಾಗೂ ಸಮಾಜ ಸೇವಕ ಅಬ್ದುಲ್ ರಹಿಮಾನ್ ಸಂಕೇಶ್ ಉದ್ಘಾಟಿಸಿ ಶುಭ ಹಾರೈಸಿದರು.
ಬಿಜೆಎಂ ಖತೀಬರಾದ ಶಮೀರ್ ಅಹ್ಮದ್ ನಈಮಿ ದುವಾ ನೆರವೇರಿಸಿದರು. ಅಲ್ ಅಮೀನ್ ಯೂತ್ ಸೆಂಟರ್‌ನ ಅಧ್ಯಕ್ಷ ಅಬ್ದುಲ್ ಸತ್ತಾರ್ ಪೈಚಾರ್ ಅಧ್ಯಕ್ಷತೆ ವಹಿಸಿದ್ದರು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಮೀಫ್ ಉಪಾಧ್ಯಕ್ಷರಾದ ಕೆ.ಎಂ.ಮುಸ್ತಫ, ಸವಣೂರು ಗ್ರಾ.ಪಂ.ಸದಸ್ಯ ಎಂ.ಎ.ರಫೀಕ್ ಶುಭ ಹಾರೈಸಿದರು.
ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಪೈಚಾರ್, ಪೈಚಾರ್ ಮದರಸಾ ಸದರ್ ಮುಅಲ್ಲಿಮ್ ಹಂಝ ಝುಹರಿ, ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಮಾಡನ್ನೂರು ನೂರುಲ್ ಹುದಾ ಉಪಾಧ್ಯಕ್ಷ ಹಾಜಿ ಇಬ್ರಾಹಿಂ, ನ.ಪಂ ಸದಸ್ಯ ಶರೀಫ್ ಕಂಠಿ, ಗ್ರಾ.ಪಂ.ಸದಸ್ಯ ಮುಜಿಬ್ ಪೈಚಾರ್, ಶಾಂತಿನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಝೀರ್ ಶಾಂತಿನಗರ, ಮುಖಂಡರುಗಳಾದ ಅಶ್ರಪ್ ಟರ್ಲಿ,ಅಬ್ದುಲ್ ಖಾದರ್ ಟಿ.ಎಂ, ಉದ್ಯಮಿ ಫೈಝಲ್ ಕಟ್ಟೆಕ್ಕಾರ್, ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಝಾಕ್ ಕೆನರಾ, ಎಸ್ ವೈ ಅಬ್ದುಲ್ ರಹಿಮಾನ್, ಜಯನಗರ ಮಸೀದಿ ಮತ್ತು ಮದರಸ ಅಧ್ಯಕ್ಷ ಹಾಜಿ ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆರ್.ಬಿ.ಬಶೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೌಫಲ್ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಅಲ್ ಅಮೀನ್ ಯೂತ್ ಸೆಂಟರ್‌ನ ಉಪಾಧ್ಯಕ್ಷ ಹನೀಫ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ, ಸದಸ್ಯರಾದ ಮುಜೀಬ್ ರಹಿಮಾನ್, ಕರೀಂ ಕೆ.ಎಂ. ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.