ಬಪ್ಪಳಿಗೆ NRI ಕಮಿಟಿ ಹಾಗೂ ಗ್ಲೋಬಲ್ ಫ್ರೆಂಡ್ಸ್ ವತಿಯಿಂದ ಬಪ್ಪಳಿಗೆ ಮಸೀದಿ ಅಧ್ಯಕ್ಷ ಹಮೀದ್ ಹಾಜಿ ಲೌಲಿಯವರಿಗೆ ದುಬೈಯಲ್ಲಿ ಸನ್ಮಾನ
ಖಾಸಗಿ ಕಾರ್ಯ ನಿಮಿತ್ತ ದುಬೈ ಪ್ರವಾಸದಲ್ಲಿರುವ ಬಪ್ಪಳಿಗೆಯ ಮಸೀದಿಯ ಅಧ್ಯಕ್ಷರಾದ ಲೌಲಿ ಹಮೀದ್ ಹಾಜಿಯವರನ್ನು ಅನಿವಾಸಿ ಬಪ್ಪಳಿಗೆಯ NRI ಸಮಿತಿ ಹಾಗೂ ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ನ ಪದಾಧಿಕಾರಿಗಳು ಭೇಟಿಯಾಗಿ ಸನ್ಮಾನಿಸಿದರು.
ದುಬಾಯಿಯ ಅಲ್ ಹೈಲ್ ಮೆಟ್ರೋ ಸ್ಟೇಷನ್ ಸಮೀಪದ ರೆಸ್ಟೋರೆಂಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ NRI ಕಮಿಟಿ ಪ್ರಮುಖರಾದ ಹಮೀದ್ ಕಮಾಂಡೋ ಅಧ್ಯಕ್ಷತೆ ವಹಿಸಿದರು. ಗ್ಲೋಬಲ್ ಫ್ರೆಂಡ್ಸ್ ನ ಪ್ರಮುಖರಾದ ಬಿ.ಟಿ.ನಝೀರ್ ಸಮಾರಂಭವನ್ನು ಉದ್ಘಾಟಿಸಿದರು.
ಅಬ್ದುಲ್ ನಾಸಿರ್ ದುಆಃ ನೆರವೇರಿಸಿದರು. ಬಳಿಕ ಎರಡು ಸಮಿತಿಗಳ ಕಾರ್ಯಕರ್ತರು ಜೊತೆಯಾಗಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಂಸುದ್ದೀನ್ ಯು, ಅಬ್ದುಲ್ ರಹಿಮಾನ್ ಬಿ.ಹೆಚ್, ಮನ್ಸೂರ್,
ಹಾರಿಸ್ ಪಿ.ಬಿ, ರಹ್ನಾಝ್, ನೌಶಾದ್, ಸಫ್ವಾನ್, ಖಲೀಲ್ ಹಾಗೂ ದುಬೈ ಉದ್ಯಮಿ ಲೌಲಿ ಹಮೀದ್ ಹಾಜಿಯ ಅಳಿಯ ನಿಹಾಲ್ ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಲೌಲಿ ಹಮೀದ್ ಹಾಜಿಯವರು ಜಮಾಅತಿನ ಸರ್ವಾಂಗೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ NRI ಹಾಗೂ ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ (BGF) ಸಮಿತಿಯ ಸೇವೆಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಅಬ್ದುಲ್ ನಾಸಿರ್ ಯು ಸ್ವಾಗತಿಸಿದರು. ಶಂಸುದ್ದೀನ್ ವಂದಿಸಿದರು. ಜಾಬಿರ್ ಯು ಕಾರ್ಯಕ್ರಮ ನಿರೂಪಿಸಿದರು.