ಕರಾವಳಿ

ಹೆಸರು ಮಾತ್ರ ಇಟ್ಟರೆ ಸಾಲದು ಮೂಲಭೂತ ಸೌಕರ್ಯವೂ ಆಗಲಿ:
ಪುತ್ತೂರು KSRTC ಬಸ್ ನಿಲ್ದಾಣಕ್ಕೆ ಕೋಟಿಚೆನ್ನಯ ನಾಮಕರಣಕ್ಕೆ ಸ್ವಾಗತ;ಅಶೋಕ್ ಪೂಜಾರಿ ಬೊಳ್ಳಾಡಿ




ಪುತ್ತೂರು: ಪುತ್ತೂರಿನ KSRTC ಬಸ್ ನಿಲ್ದಾಣಕ್ಕೆ ದೈವೀ ಪುರುಷರಾದ ಕೋಟಿ ಚೆನ್ನಯರ ಹೆಸರು ನಾಮಕರಣ ಮಾಡಿರುವುದು ಉತ್ತಮ ವಿಚಾರವಾಗಿದೆ. ಕೋಟಿ ಚೆನ್ನಯರ ಹೆಸರು ನಾಮಕರಣವಾದ ಬಳಿಕ ನಿಲ್ದಾಣದಲ್ಲಿ ಯಾವುದೇ ಕುಂದು ಕೊರತೆಗಳು ಕಾಣಿಸಬಾರದು, ಮೂಲಭೂತ ಸೌಕರ್ಯಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಮೊದಲ ಜವಾಬ್ದಾರಿಯಾಗಿದೆ ಎಂದು ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಆಗ್ರಹಿಸಿದ್ದಾರೆ.

ಹಿಂದಿನ ಶಾಸಕರ ಅವಧಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಹಾಲಿ ಶಾಸಕರಾದ ಮಠಂದೂರುರವರು ನಿಲ್ದಾಣದಲ್ಲಿ ಸಕಲ ಸೌಕರ್ಯವನ್ನು ಮಾಡುವಲ್ಲಿ ಮುತುವರ್ಜಿವಹಿಸಬೇಕು. ಸ್ವಚ್ಚತೆ ಸೇರಿದಂತೆ ಮೂಲ ಬೂತ ವ್ಯವಸ್ಥೆಗಳಲ್ಲಿ ಲೋಪವಾಗದಂತೆ ವ್ಯವಸ್ಥೆ ಮಾಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಪುತ್ತೂರು ಕೆಎಸ್‌ಆರ್‌ಟಿಸಿಯಲ್ಲಿ ಈ ಹಿಂದೆ ಇದ್ದ ಪೆಟ್ರೋಲ್ ಪಂಪ್ ಮತ್ತೆ ಪ್ರಾರಂಭಿಸಬೇಕು. ಸರಕಾರಿ ಬಸ್ಸುಗಳಿಗೆ ರಾಜಕೀಯ ಮುಖಂಡರೋರ್ವರ ಪೆಟ್ರೋಲ್ ಪಂಪಿನಿಂದ ಇಂಧನ ತುಂಬಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು ಇದು ಸರಿಯಲ್ಲ. ಸರಕಾರಿ ಬಸ್ಸುಗಳಿಗೆ KSRTC ಪೆಟ್ರೋಲ್ ಪಂಪಿನಿಂದಲೇ ಇಂಧನ ತುಂಬಿಸುವ ವ್ಯವಸ್ಥೆಯನ್ನು ಮಾಡಬೇಕು. ಪುತ್ತೂರು ಬಸ್ ನಿಲ್ದಾಣದಲ್ಲಿ ಅಹಿತಕರ ಘಟನೆಗಳು ನಡೆದರೆ ಕೋಟಿ ಚೆನ್ನಯ ನಿಲಾಣದಲ್ಲಿ ಎಂಬ ಪದವನ್ನು ಬಳಕೆ ಮಾಡಬಾರದು, ಇದರಿಂದ ಕೋಟಿ ಚೆನ್ನಯರ ಪಾವಿತ್ರ್ಯಕ್ಕೆ ದಕ್ಕೆಯಾಗುತ್ತದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!