ಕರಾವಳಿ

“ಸಮಸ್ತ”ದ ಪಾರಂಪರಿಕ ತತ್ವ ಸಂದೇಶಗಳು ಶಾಂತಿ ನೆಲೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ: ಅಲವಿ ದಾರಿಮಿ ಕುಝಿಮಣ್ಣ





ವಿಟ್ಲ: ಇಸ್ಲಾಮಿನ ಪಾರಂಪರಿಕ ತತ್ವ ಸಿದ್ದಾಂತಗಳನ್ನು ಪ್ರತಿಪಾದಿಸುತ್ತಿರುವ ಉಲಮಾ ಸಂಘಟನೆ “ಸಮಸ್ತ”ಒಕ್ಕೂಟದ ಕಾರ್ಯ ಚಟುವಟಿಕೆಗಳು ದೇಶದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಧಾರ್ಮಿಕ ಗ್ರಂಥಗಳ ಬಾಹ್ಯಾರ್ಥವನ್ನು ಮಾತ್ರ ಕಲಿತು ಅದರ ತಿರುಳನ್ನು ಅರ್ಥ ಮಾಡಿಕೊಳ್ಳದ ಜನರಿಂದಾಗಿ ಧರ್ಮಕ್ಕೆ ಕೆಟ್ಟ ಹೆಸರು ಉಂಟಾಗುತ್ತಿದೆ.
ಯುವ ಪೀಳಿಗೆ ಧರ್ಮವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿದ ಉಲಮಾಗಳಿಂದ ದೂರ ಸರಿದು ರಾಜಕಿಯ ಸ್ವಾರ್ಥಿಗಳ ಹಿಂದೆ ಹೋದರೆ ಸಾಮಾಜಿಕ ವ್ಯವಸ್ಥೆ ಕಲುಷಿತಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಕೇರಳದ ಖ್ಯಾತ ವಾಗ್ಮಿ ಅಲವಿ ದಾರಿಮಿ ಕುಝಿಮಣ್ಣ ಹೇಳಿದ್ದಾರೆ.

ಅವರು ಜಿಲ್ಲಾ ದಾರಿಮೀಸ್ ವತಿಯಿಂದ ಇಲ್ಲಿಗೆ ಸಮೀಪದ ಕೆಲಿಂಜ ಮಸೀದಿ ವಠಾರದಲ್ಲಿ ಆಯೋಜಿಸಲಾಗಿದ್ದ ಶಂಸುಲ್ ಉಲಮಾ ಅನುಸ್ಮಣೆ ಹಾಗೂ ಅಧ್ಯಯನ ಶಿಬಿರದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿದರು.
ಕೆ ಬಿ ಅಬ್ದುಲ್ ಖಾದರ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ರಾಜ್ಯ ದಾರಿಮಿ ಒಕ್ಕೂಟ ಅಧ್ಯಕ್ಷ ಎಸ್ ಬಿ ಮುಹಮ್ಮದ್ ದಾರಿಮಿ ಉದ್ಘಾಟಿಸಿದರು.
ಸಮಸ್ತ ಮುಶಾವರ ಸದಸ್ಯರಾದ ಉಸ್ಮಾನುಲ್ ಪೈಝಿ ತೋಡಾರ್, ಬಂಬ್ರಾಣ ಉಸ್ತಾದ್ ಅನುಗ್ರಹ ಭಾಷಣ ಮಾಡಿದರು. ಸಂಪ್ಯ ಅಬ್ದುಲ್ ಹಮೀದ್ ದಾರಿಮಿ ದುವಾಗೈದರು.

Leave a Reply

Your email address will not be published. Required fields are marked *

error: Content is protected !!