ಕರಾವಳಿ

ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸಜ್ಜನ ಪ್ರತಿಷ್ಠಾನ ಸಹಯೋಗದೊಂದಿಗೆ ಶಿಕ್ಷಕಿಯರಿಗೆ ತರಬೇತಿ ಕಾರ್ಯಾಗಾರ

ಪುತ್ತೂರು: ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಮೇನಾಲ ಈಶ್ವರಮಂಗಲ ಇಲ್ಲಿ ಸಜ್ಜನ ಪ್ರತಿಷ್ಠಾನ ಸಹಯೋಗದೊಂದಿಗೆ ಶಿಕ್ಷಕಿಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು.


ಕಾರ್ಯಾಗಾರ ಉದ್ಘಾಟಿಸಿದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷರು, ಮಧುರಾ ಸ್ಕೂಲ್ ಆಡಳಿತ ನಿರ್ದೇಶಕರೂ, ಫಾರ್ಮಡ್ ಕಂಪನಿ ಆಡಳಿತ ಮತ್ತು HR ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಆದ ಡಾಕ್ಟರ್ ಉಮ್ಮರ್ ಬೀಜದಕಟ್ಟೆಯವರು ಶಿಕ್ಷಕರ ತರಬೇತಿಯ ಅಗತ್ಯದ ಬಗ್ಗೆ ಸವಿವರವಾಗಿ ಮನದಟ್ಟು ಮಾಡಿಕೊಟ್ಟರು. ತಂತ್ರಂಜಾನವು ಅಭಿವೃದ್ಧಿಯಾದಂತೆ ತರಗತಿ ನಡೆಸುವ ಕೌಶಲ್ಯ ಅಭಿವೃದ್ಧಿ ಆಗಬೇಕಾಗಿದೆ. ಮಕ್ಕಳ ಪೋಷಕರ ಮತ್ತು ಆಡಳಿತ ಮಂಡಳಿಯ ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ತರಗತಿ ನಡೆಸುವ ಕೌಶಲ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತರಬೇತಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಪರವಾಗಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶರೀಫ್ ಸುದ್ದಿ, ಅಡ್ವೋಕೇಟ್ ಮಂಜುನಾಥ್, ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್, ಅಡ್ಮಿನ್ ಆಫೀಸರ್ ನಾಸೀರ್ ಹಾಗೂ ಮ್ಯಾನೇಜರ್ ರೈಹಾನ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ರಾಜೀಶ್ ಕುಮಾರ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!