25 ಜನರಿಂದ ಆರಂಭಗೊಂಡ ದೀಪಾವಳಿ ವಸ್ತ್ರ ವಿತರಣೆ ಇಂದು 75 ಸಾವಿರ ಜನರಿಗೆ ವಿತರಣೆ ಮಾಡುವ ಹಂತಕ್ಕೆ ಬಂದಿದೆ- ಅಶೋಕ್ ರೈ
ಪುತ್ತೂರು: 25 ಜನರಿಗೆ ವಸ್ತ್ರದಾನ ಮಾಡುವ ಮೂಲಕ ಪ್ರಾರಂಭವಾದ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮ ಇಂದು 75,000 ಜನರಿಗೆ ವಸ್ತ್ರ ವಿತರಣೆ ಮಾಡುವ ಹಂತಕ್ಕೆ ಬಂದಿರುವುದು ಅತೀವ ಸಂತಸ ತಂದಿದೆ. ನವೆಂಬರ್ 2ರಂದು ಕೊಂಬೆಟ್ಟು ಮೈದಾನದಲ್ಲಿ ರೈ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಬೃಹತ್ ವಸ್ತ್ರ ವಿತರಣಾ ಸಮಾರಂಭದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಟ್ರಸ್ಟ್ ನ ಮುಖ್ಯ ಪ್ರವರ್ತಕರಾದ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಅಕ್ಟೋಬರ್ 22ರಂದು ಪುತ್ತೂರು ಅಶ್ವಿನಿ ಹೋಟೆಲ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಈ ವರ್ಷವೂ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಬೆಡ್ ಶೀಟ್ ನೀಡಲಾಗುವುದು. ಒಂದು ಮನೆಯಿಂದ ಐದು ಮಂದಿ ಬಂದರೆ ಐದು ಮಂದಿಗೂ ವಸ್ತ್ರ ನೀಡಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.