ಕರಾವಳಿ

ಆ.15: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಎಕ್ಸೆಲೆನ್ಸಿಯಾ-2025 ವಿನೂತನ ಕಾರ್ಯಕ್ರಮ

ಪುತ್ತೂರು: ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಎಕ್ಸೆಲೆನ್ಸಿಯಾ-2025 ವಿನೂತನ ಕಾರ್ಯಕ್ರಮ ಆ.15ರಂದು ನೇರಳಕಟ್ಟೆ ಜನಪ್ರಿಯಾ ಗಾರ್ಡನ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾರ್ಯಕ್ರಮ ನಡೆಯಲಿದೆ. ಜನಪ್ರಿಯಾ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಚೇರ್‌ಮೆನ್ ಡಾ.ಅಬ್ದುಲ್ ಬಶೀರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಎಕ್ಸ್‌ಪರ್ಟ್‌ಗಳು ಭಾಗವಹಿಸಲಿದ್ದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ಪೋಷಕರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ಅಲ್ಲದೇ ಲಕ್ಕಿ ಸ್ಟೂಡೆಂಟ್(ಬಾಲಕ/ಬಾಲಕಿ) ಲಕ್ಕಿ ಫಾದರ್, ಲಕ್ಕಿ ಮದರ್ ಸೇರಿದಂತೆ ಇನ್ನಿತರ ಅನೇಕ ಅದೃಷ್ಟ ಬಹುಮಾನ ಕೂಡಾ ಇರಲಿದೆ. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಕೂಡಾ ಏರ್ಪಡಿಸಲಾಗುತ್ತದೆ. ಬೆಳಿಗ್ಗೆ ಗಂಟೆ 10-45ರಿಂದ 12-15ರ ವರೆಗೆ ‘ಪ್ರೌಡ್ ಪೇರೆಂಟ್ ಅವಾರ್ಡ್’ ಕಾರ್ಯಕ್ರಮ ನಡೆಯಲಿದ್ದು ಇದರ ಉದ್ಘಾಟನೆಯನ್ನು ಮಹಮ್ಮದ್ ಶೌಕತ್ ಅಝೀಂ IAS ಅವರ ಹೆತ್ತವರಾದ ಶೇಕ್ ಅಬ್ದುಲ್  ಹಾಗೂ ಮೈಮೂನ ನೆರವೇರಿಸಲಿದ್ದು ಇದೇ ಸಂದರ್ಭದಲ್ಲಿ 17 ಮಂದಿ ಹೆಮ್ಮೆಯ ಪೋಷಕರಿಗೆ ಅವಾರ್ಡ್ ನೀಡಿ ಗೌರವಿಸಲಾಗುತ್ತದೆ.ಅಪರಾಹ್ನ 2.30ರಿಂದ ‘ಎ ಡೇ ವಿತ್ ಇನ್ಸ್ಪೈರಿಂಗ್ ಮೈಂಡ್ಸ್’ ಕಾಯಕ್ರಮ ನಡೆಯಲಿದ್ದು ಸ್ಟೂಡೆಂಟ್ ಸ್ಟಾರ್ ಪರ್ಫಾಮೆನ್ಸ್ ಅವಾರ್ಡ್ ನೀಡಲಾಗುತ್ತದೆ.

ಭಾಗವಹಿಸುವ ಸಾಧಕರು:
ವಿವಿಧ ಕ್ಷೇತ್ರಗಳ ಸಾಧಕರಾದ ಅಬು ಸಾಲಿಯಾ ಖಾನ್ (ಯುಪಿಎಸ್‌ಸಿ ಎಐಆರ್ 588 & ಐಎಫ್‌ಒಎಸ್ ಎಐಆರ್ 107), ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಉಪನಿರ್ದೇಶಕಿ ಅಸ್ಮಾ ಕೆ, ನೋವಿಗೊ ಸೊಲ್ಯೂಷನ್ಸ್‌ನ ಸಹಸಂಸ್ಥಾಪಕರು ಮತ್ತು ಸಿಸಿಒ ಆಗಿರುವ ಶಿಹಾಬ್ ಕಲಂದರ್, ಚಾರ್ಟರ್ಡ್ ಅಕೌಂಟೆಂಟ್ ಸಿಎ ತಬಿಶ್ ಹಸನ್, ಕಾಸರಗೋಡು ಉದ್ಮಾ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ನಾಜಿಹ್ ಅಹ್ಮದ್, ಎಂ.ಟೆಕ್, ಐಐಟಿ ಮದ್ರಾಸ್, ಎಲ್ & ಟಿ ಬೆಂಗಳೂರು ಇದರ ಹಿರಿಯ ಇಂಜಿನಿಯರ್ ಶೇಖ್ ಮೊಹಮ್ಮದ್ ಜುನೈನ್, ಬೆಂಗಳೂರು ಆಚಾರ್ಯ ಸಂಸ್ಥೆಯ ಮನೋವಿಜ್ಞಾನ ಸಹಾಯಕ ಪ್ರಾಧ್ಯಾಪಕರಾದ ಮೊಹಮ್ಮದ್ ಸ್ವರೂಪ್, ವಿಟಿಯುನಿಂದ ದಾಖಲೆಯ 16 ಚಿನ್ನದ ಪದಕಗಳನ್ನು ಗಳಿಸಿದ ಗೋಲ್ಡನ್ ಗರ್ಲ್ ಖ್ಯಾತಿಯ ಬುಷ್ರಾ ಮತೀನ್ ರಾಯಚೂರು ಮೊದಲಾದವರು ಭಾಗವಹಿಸಲಿದ್ದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಸ್ಫೂರ್ತಿ ತುಂಬಲಿದ್ದಾರೆ.

ಭಾಗವಹಿಸುವ ಗಣ್ಯರು: ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪೆನಿಯ ಸಿಇಒ ಝಕರಿಯಾ ಹಾಜಿ ಜೋಕಟ್ಟೆ, ಮಂಗಳೂರು ವೈಟ್ ಸ್ಟೋನ್‌ನ ಸಿಇಒ ಮುಹಮ್ಮದ್ ಶರೀಫ್, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮುಹಮ್ಮದ್ ಹಾಜಿ, ಕೆಐಸಿ ಗಲ್ಫ್ ಕಮಿಟಿ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಮಾಣಿ ಸೋಶಿಯಲ್ ಇಕ್ವಾ ಪೆಡರೇಶನ್‌ನ ಅಧ್ಯಕ್ಷ ಅಬ್ದುಲ್ ರಹೀಂ ಹಾಜಿ ಕೊಡಾಜೆ, ಮಂಗಳೂರು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ.ಹಸನ್ ಮುಬಾರಕ್, ವಿಟ್ಲ ಹೊರಿಝೋನ್ ಆಂಗ್ಲ ಮಾದ್ಯಮ ಶಾಲೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಹಳೆಮನೆ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಮಿತ್ತೂರು ದಾರುಲ್ ಇರ್ಶಾದ್ ಸಂಸ್ಥೆಯ ನಿರ್ದೇಶಕ ಮೌಲಾನಾ ಸ್ವದಕತುಲ್ಲಾ ನದ್ವಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉಮರ್ ಕುಂಞಿ ನಡ್ಜೆ, ಸೌದಿ ಅರೇಬಿಯಾದ ರಖ್ವಾನಿ ಕಂಪೆನಿಯ ಸಿಇಒ ಅಬ್ದುಲ್ ಸಲಾಂ ಹುಸೈನ್, ಸಾಲ್ಮರ ಮೌಂಟೆನ್ ವ್ಯೂ ವಿದ್ಯಾಸಂಸ್ಥೆಯ ಚೇರ್‌ಮೆನ್ ಕೆ.ಪಿ ಅಹ್ಮದ್ ಹಾಜಿ ಆಕರ್ಷನ್, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಹಿರಿಯ ಪತ್ರಕರ್ತ ಹಮೀದ್ ಪುತ್ತೂರು, ಬೆಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧೀಕ್ಷಕ ನಾಸಿರ್ ಹುಸೈನ್, ಮೀಫ್ ಉಪಾಧ್ಯಕ್ಷ ಮುಸ್ತಫಾ ಸುಳ್ಯ, ಸಾಲ್ಮರ ದಾರುಲ್ ಹಸನಿಯಾ ಸಂಸ್ಥೆಯ ಹಸನ್ ಹಾಜಿ ಪುತ್ತೂರು, ಮಂಗಳೂರು ಎಸಿಇ ಐಎಎಸ್ ಅಕಾಡೆಮಿಯ ನಿರ್ದೇಶಕ ನಝೀರ್ ಅಹ್ಮದ್, ಸೌದಿ ಅರೇಬಿಯಾ ಅಲೈಮಿಟೆಕ್‌ನ ಸಿಇಒ ಮುಹಮ್ಮದ್ ನಸೀರ್, ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಕ ಹಾಜಿ ಮುಹಮ್ಮದ್ ಕುಕ್ಕುವಳ್ಳಿ, ನ್ಯಾಯವಾದಿ ಮತ್ತು ನೋಟರಿ ಶೇಖ್ ಇಸಾಕ್ ಕಡಬ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 4.30ಕ್ಕೆ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನಿಂದ ಮುಂದಿನ ವರ್ಷದ ಸ್ಕಾಲರ್‌ಶಿಪ್‌ಗೆ ರಿ-ರಿಜಿಸ್ಟ್ರೇಷನ್ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಪ್ರಯೋಜನಕಾರಿಯಾದ ಕಾರ್ಯಕ್ರಮವಾಗಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!