ಇಂದು ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರೋಪ-ಅನ್ನದಾನ
ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರೋಪ ಮಾ.4ರಂದು ನಡೆಯಲಿದೆ.
ಮಗ್ರಿಬ್ ನಮಾಜಿನ ಬಳಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಅಸ್ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಗಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ಅಪ್ಪಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಗಳ್ ಕಿಲ್ಲೂರು ದುವಾಗೆ ನೇತೃತ್ವ ನೀಡಲಿದ್ದು ಝಯ್ನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಕನ್ನಡ ಭಾಷಣ ನಡೆಸಲಿದ್ದಾರೆ, ಯಾಸೀನ್ ಚೌಹರಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉರೂಸ್ ಕೊನೆಯಲ್ಲಿ ಅನ್ನದಾನ ಇದೆ ಎಂದು ಉರೂಸ್ ಕಮಿಟಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ತಿಳಿಸಿದ್ದಾರೆ.