ಕ್ರೀಡೆರಾಷ್ಟ್ರೀಯ

ಐಪಿಎಲ್ ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಝಹೀರ್‌ ಖಾನ್‌

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)ಗೆ ವಿಶ್ವಕಪ್‌ ವಿಜೇತ ಟೀಮ್ ಇಂಡಿಯಾ ತಂಡದ ಬೌಲರ್‌ ಝಹೀರ್‌ ಖಾನ್‌ ಅವರು ಮರು ಎಂಟ್ರಿಯಾಗಿದ್ದಾರೆ.

2018 ರಿಂದ 2022ರವರೆಗೂ ಐದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರೋಹಿತ್‌ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಕರಾಗಿದ್ದ ಝಹೀರ್‌ಖಾನ್‌, ಕಳೆದೆರಡು ವರ್ಷಗಳಿಂದ ಐಪಿಎಲ್‌ ಟೂರ್ನಿಯಿಂದ ಹೊರಗುಳಿದಿದ್ದರು.

ಆದರೆ 2025ರ ಐಪಿಎಲ್‌ ನಿಮಿತ್ತ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು ಲಕ್ನೋ ಸೂಪರ್‌ ಜಯಂಟ್ಸ್ ತಂಡದ ಮೆಂಟರ್‌ ಆಗಿ ಜಾಹೀರ್‌ಖಾನ್‌ ಅವರು ಮತ್ತೆ ಐಪಿಎಲ್‌ ಟೂರ್ನಿಗೆ ಮರಳಲಿದ್ದಾರೆ ಎಂದು ಎಲ್‌.ಎಸ್‌.‍ಜಿ ಕಚೇರಿ ಸ್ಪಷ್ಟಪಡಿಸಿದೆ. ಝಹೀರ್‌ಖಾನ್‌ ಅವರು ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್‌ ಡೆವಿಲ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದು 100 ಪಂದ್ಯಗಳಿಂದ 7.58 ಸರಾಸರಿಯಲ್ಲಿ 102 ವಿಕೆಟ್‌ ಪಡೆದಿದ್ದರು.

Leave a Reply

Your email address will not be published. Required fields are marked *

error: Content is protected !!