ಸಚಿನ್ ತೆಂಡೂಲ್ಕರ್ ಅವರ ಇನ್ನೊಂದು ದಾಖಲೆ ಮುರಿದು ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ಹೊಸತೊಂದು ದಾಖಲೆ ಬರೆದಿದ್ದು ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಶ್ರೀಲಂಕಾ ವಿರುದ್ಧ ತಿರುವನಂತಪುರದಲ್ಲಿ ಇಂದು ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಭಾನುವಾರ 166 (110) ರನ್ ಸಿಡಿಸಿದರು. ಭಾರತ ನೆಲದಲ್ಲಿ ವಿರಾಟ್ ಕೊಹ್ಲಿ ಅವರ 21ನೇ ಏಕದಿನ ಶತಕವಿದು. ಈ ಮೂಲಕ ಅವರು ತವರಿನಲ್ಲಿ 20 ಏಕದಿನ ಶತಕ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ.
ಇಂದು ದಾಖಲಾದ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 34 ವರ್ಷದ ವಿರಾಟ್ ಕೊಹ್ಲಿ ಅವರ ಒಟ್ಟು ಶತಕಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಸಚಿನ್ ತೆಂಡೂಲ್ಕರ್ ಅವರು 49 ಶತಕಗಳನ್ನು ಸಿಡಿಸಿದ್ದಾರೆ.