ಕರಾವಳಿ

ಮೀನುಗಾರಿಕೆ‌ ಇಲಾಖೆಯ‌ ಮೂಲಕ‌ 50 ಮನೆ ನೀಡಲಾಗಿದೆ: ಅಶೋಕ್ ರೈ

ಪುತ್ತೂರು: ಮೀನುಗಾರಿಕಾ ಇಲಾಖೆಯ ಮೂಲಕ‌ 50 ಮನೆಯನ್ನು ಬಡವರಿಗೆ ಹಂಚಲಾಗಿದೆ, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸರಕಾರ‌ಗಳು‌ ಮಂಜೂರು‌ ಮಾಡಿರಲಿಲ್ಲ ಇದರಿಂದ ಬಡವರು ನೊಂದು ಹೋಗಿದ್ದರು. ಇಂದು‌ 10 ಸಾವಿರ ಮೌಲ್ಯದ ಕಿಟ್ ಗಳನ್ನು ಕೆಲವು ಕುಟುಂಬಗಳಿಗೆ ನೀಡಲಾಗಿದೆ. ಸರಕಾರ‌ ಪ್ರತೀಯೊಂದು ಇಲಾಖೆಯ‌ ಮೂಲಕ ಬಡವರಿಗೆ ನೆರವು ನೀಡುವ ಕಾರ್ಯವನ್ನು‌ ಮಾಡುತ್ತಿದೆ. ರಾಜ್ಯ ಸರಕಾರ ಬಡವರ ಪರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಪರಿಸರದಲ್ಲಿ ಎಲ್ಲವೂ ಇರಬೇಕು,‌ಪ್ರಾಣಿ, ಪಕ್ಷಿ ಮೀನು ಸಹಿತ‌ಎ ಲ್ಲವೂ ನಮ್ಮ‌ ನಡುವೆ ಬದುಕಬೇಕು.‌ ತಾಲೂಕಿನ ಪ್ರತೀ ಕೆರೆಗಳಲ್ಲಿ ಮೀನು ಸಾಕುವ ಕಾರ್ಯವನ್ನು ಮಾಡಬೇಕು ಎಂದು‌ ಶಾಸಕರು ಹೇಳಿದರು.
ತಾಪಂ ಸಹಾಯಕ ನಿರ್ದೇಶಕಿ‌ ಶೈಲಜಾ ರವರು‌ ಮಾತನಾಡಿ ಶಿಭಿರದಲ್ಲಿ‌ ಭಾಗವಹಿಸಿ ಇದರ‌ ಪ್ರಯೋಜನವನ್ನು ಪಡೆದುಕೊಳ್ಳಬೇಕು, ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ‌ ಪ್ರತೀಯೊಬ್ಬರೂ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿ‌ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಗಜೇಂದ್ರ ಮೀನುಗಾರಿಕ ಪ್ರಾಧ್ಯಾಪಕ ಪ್ರಭಾಕರ , ನಿವೃತ್ತ ಫ್ರೊಪೆಸರ್ ಡಾ.ಫಝಲ್ ಉಪಸ್ಥಿತರಿದ್ದರು.
ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ಮಂಜುಳಾ ಸಿ ಶೆಣೈ ಸ್ವಾಗತಿಸಿ ವಂದಿಸಿದರು.‌ ತಾಪಂ‌ ಸಿಬಂದಿ‌‌ ನಮಿತಾ ಕಾರ್ಯಕ್ರಮ‌ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!