ಪುತ್ತೂರು: ಯುವಕ ಆತ್ಮಹತ್ಯೆ
ಪುತ್ತೂರು: ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಪುತ್ತೂರು ತಾಲೂಕಿನ ಮೊಟ್ಟೆತಡ್ಕ ಸಮೀಪದ ಪಂಜಳ ಎಂಬಲ್ಲಿ ನಡೆದಿದೆ. ವಿಶ್ವನಾಥ ಅಲಿಯಾಸ್ ವೇಣು (32) ಮೃತ ಯುವಕ.

ಪಂಜಳದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ ವಿಶ್ವನಾಥ್ ಮನೆಯೊಳಗಿನ ಮರದ ಅಡ್ಡಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.